ಗೋದಿ ಹಿಟ್ಟಿನ ಮಸಾಲೆ ನಿಪ್ಪಟ್ಟು

– ಸವಿತಾ.

ಗೋದಿ ನಿಪ್ಪಟ್ಟು

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಬಟ್ಟಲು
  • ತುಪ್ಪ – 2 ಚಮಚ
  • ಸಕ್ಕರೆ – 1 ಚಮಚ
  • ಜೀರಿಗೆ – 1/2 ಚಮಚ
  • ಚಕ್ಕೆ – 1/4 ಇಂಚು
  • ಏಲಕ್ಕಿ – 2
  • ಗೋಡಂಬಿ – 4
  • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಗೋದಿ ಹಿಟ್ಟಿಗೆ ತುಪ್ಪ, ಜೀರಿಗೆ, ಚಕ್ಕೆ, ಏಲಕ್ಕಿ ಪುಡಿಮಾಡಿ ಹಾಕಿ. ಗೋಡಂಬಿ ಸಣ್ಣ ಕತ್ತರಿಸಿ ಸೇರಿಸಿ. ಸಕ್ಕರೆ, ಸ್ವಲ್ಪ ನೀರು, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಿ. ಇಪ್ಪತ್ತು ನಿಮಿಶ ನೆನೆಯಲು ಇಡಬೇಕು.

ಚಪಾತಿಗಿಂತ ಸ್ವಲ್ಪ ದಪ್ಪ ಲಟ್ಟಿಸಿ, ಬಿಸ್ಕೆಟ್ ಅಳತೆಯ ಒಂದು ಸ್ಟೀಲ್ ಡಬ್ಬದ ಮುಚ್ಚಳದಿಂದ ಕತ್ತರಿಸಿ ಇಟ್ಟುಕೊಳ್ಳಿ. ಪೋರ‍್ಕ್ ಚಮಚ ಬಳಸಿ ಎರಡೂ ಬದಿ ಸಣ್ಣ ಸಣ್ಣ ತೂತು ಮಾಡಿ. ಮಂದ ಉರಿ ಇಟ್ಟು ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ನಿಪ್ಪಟ್ಟು ಅತವಾ ಬಿಸ್ಕಿಟ್ ಸವಿಯಲು ಸಿದ್ದ. ಸಂಜೆಯ ಕುರುಕಲು ತಿಂಡಿ. ಅತವಾ ಬಿಸ್ಕಿಟ್ ತರಹ ಚಹಾ, ಕಾಪೀ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: