ಕವಿತೆ : ವಿದಾಯ

ಸ್ಪೂರ‍್ತಿ. ಎಂ.


ಅದೇನು ಕಾಲದ ಮಾಯ
ಬಂದೇ ಬಿಟ್ಟಿತು ಆ ಸಮಯ
ಹ್ರುದಯವೆಲ್ಲ ದುಕ್ಕಮಯ
ಹೇಳಬೇಕಲ್ಲಾ ಎಂದು, ವಿದಾಯ

ಸಕಿಯೊಡನೆ ಕಳೆದ ಸಮಯ
ಆ ಗಳಿಗೆ ಅಮ್ರುತಮಯ
ಅದನೆನೆದು ಕೊರಗಿತು ಹ್ರುದಯ
ಹೇಳಬೇಕಲ್ಲಾ ಎಂದು, ವಿದಾಯ

ಸಕಿಯೊಡನಾಟ ಪ್ರೇಮಮಯ
ಅಳಿಸಲಾಗದು ಆ ಉಡುಗೊರೆಯ
ಇಂದು ಮನವೆಲ್ಲಾ ಶೋಕಮಯ
ಹೇಳಬೇಕಲ್ಲಾ ಎಂದು, ವಿದಾಯ

ಮನದ ಮಾತನ್ನಾಡುವೆ ಕೇಳುವೆಯಾ?
ನಿನ್ನ ಬಿಟ್ಟಿರಲಾರದು ನನ್ನ ಹ್ರುದಯ
ನನ್ನ ಮನ ನಿನ್ನ ಪ್ರೇಮ ದೇವಾಲಯ
ಆ ಪ್ರೇಮದಿ ಹೇಳುವೆ ಪ್ರೀತಿಯ ವಿದಾಯ

( ಚಿತ್ರ ಸೆಲೆ: ninjamarketing.it )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: