ಕವಿತೆ: ಮಳೆರಾಯನ ಉಡುಗೊರೆ
– ವಿನು ರವಿ.
ದೋ ದೋ ಎಂದು
ಸುರಿಯುತಿದೆ ಮಳೆ
ಒದ್ದೆ ಮುದ್ದೆಯಾದಳು ಇಳೆ
ಚಳಿಯ ಪುಳಕ ಹೆಚ್ಚಿ
ಎದೆಯೊಳಗೆ ನಡುಕ ಹುಟ್ಟಿ
ಬಳುಕುತ ಗುನುಗುತಿದೆ ತಂಗಾಳಿ
ಹೂಗಳೆಲ್ಲಾ ಬಿರಿಯುತ್ತಿವೆ
ಬಿರಿದಂತೆ ಮುದುಡುತ್ತಿವೆ
ಇಬ್ಬನಿಯ ಹೊದಿಕೆಯಲಿ ನಡುಗುತ್ತಿವೆ
ದಾರೆಯಾಗಿ ಹರಿದಳು ದರಣಿ
ಹೊನಲ ಹಾಡಾದಳು ರಮಣಿ
ಸಾಗರದ ಸಂಗಾತಿಯಾದಳು ತರುಣಿ
ಕುರುಕು ಮುರುಕುಗಳ ಸವಿರಸನೆಯಲಿ
ಕಣ್ಮುಚ್ಚಿ ದ್ಯಾನಿಸಿವೆ
ಬೆಚ್ಚನೆ ಬಾವಗಳು ಮನದಲಿ
ಮಳೆರಾಯ ನೀಡಿದಾ
ಚಳಿಯ ಉಡುಗೊರೆಗೆ
ತಣ್ಣಗೆ ನಡೆದು ಬಂದಳಾ ಮಾಗಿಯ ಚೆಲುವೆ
(ಚಿತ್ರ ಸೆಲೆ : publicdomainpictures.net)
ಇತ್ತೀಚಿನ ಅನಿಸಿಕೆಗಳು