ಕವಿತೆ : ಕೊನೆಯಾಗಲಿ ಕೊರೊನಾ

ಶ್ಯಾಮಲಶ್ರೀ.ಕೆ.ಎಸ್.

ಕೊರೊನಾ ವೈರಸ್, Corona Virus

ನೀ ಮಹಾಮಾರಿಯೋ
ಮರಣದ ರಾಯಬಾರಿಯೋ ತಿಳಿಯದು
ಕೊರೊನಾ ನಿನ್ನ ಕೀಟಲೆಗೆ
ಕೊನೆ ಎಂದಿಗೋ ತೋಚದು

ಸದ್ದಿಲ್ಲದೆ ನುಗ್ಗಿ ಬಂದು
ಜೀವಗಳ ಸಾಲಾಗಿ ನುಂಗುತಿಹೆ
ಸಂತಸದ ಬೆಳ್ಳಿ ಮೋಡ ಚದುರಿ
ದುಕ್ಕದ ಕಾರ‍್ಮೋಡ ಕವಿದಿಹೆ

ಎಲ್ಲೆ ಇಲ್ಲದ ನಿನ್ನ ಆಟಕ್ಕೆ
ವಿದಿಯು ಜೊತೆಗೂಡಿದಂತಿದೆ
ಜೀವನ ಪಯಣದ ಹಾದಿಯಲ್ಲಿ
ಮೂಕ ಮೌನ ಆವರಿಸಿದೆ

ನಿನ್ನಾರ‍್ಬಟ ಅಂತ್ಯವಾಗಿ
ಮರಣ ಮ್ರುದಂಗವು ನಿಲ್ಲಲಿ
ಬಾಡಿದ ಬಾಳ ಬಳ್ಳಿಯಲ್ಲಿ
ಹೊಸ ಚಿಗುರು ಮೂಡಲಿ

( ಚಿತ್ರಸೆಲೆ : wiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: