ಕಾಯಿ ಸಾಸಿವೆ ಅನ್ನ

– ಸವಿತಾ.

coconut mustard rice, ಕಾಯಿ ಸಾಸಿವೆ ಅನ್ನ

ಬೇಕಾಗುವ ಸಾಮಾನುಗಳು

 • ಅಕ್ಕಿ – 1 ಲೋಟ
 • ತೆಂಗಿನ ಕಾಯಿ – 1/2 ಹೋಳು
 • ಒಣ ಮೆಣಸಿನಕಾಯಿ – 4
 • ಹುಣಸೆ ಹಣ್ಣಿನ ರಸ – 2 ಚಮಚ
 • ಬೆಲ್ಲ – 2 ಚಮಚ
 • ಎಣ್ಣೆ – 4 ಚಮಚ
 • ಸಾಸಿವೆ – 1 ಚಮಚ
 • ಜೀರಿಗೆ – 1/2 ಚಮಚ
 • ಕರಿಬೇವು ಎಲೆ – 10 ಎಲೆ
 • ಉದ್ದಿನ ಬೇಳೆ – 1 ಚಮಚ
 • ಕಡಲೇ ಬೇಳೆ – 2 ಚಮಚ
 • ಕಡಲೇ ಬೀಜ – 2 ಚಮಚ
 • ಇಂಗು – 1/4 ಚಮಚ
 • ಕೊತ್ತಂಬರಿ ಸೊಪ್ಪು – ಹತ್ತು ಕಡ್ಡಿ
 • ಅರಿಶಿಣ ಪುಡಿ ಸ್ವಲ್ಪಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ತೆಂಗಿನ ಕಾಯಿ ತುರಿ ಮತ್ತು ಒಣ ಮೆಣಸಿನ ಕಾಯಿ. 1/2 ಚಮಚ ಸಾಸಿವೆ, ಹುಣಸೆ ರಸ ಮತ್ತು ಬೆಲ್ಲ, ಸ್ವಲ್ಪ ಕೊತ್ತಂಬರಿ ಸೊಪ್ಪು ಮಿಕ್ಸರ್ ನಲ್ಲಿ ತರಿ ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ.

ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಇಂಗು, ಕರಿಬೇವು, ಕಡಲೇ ಬೀಜ ಸೇರಿಸಿ ಹುರಿಯಿರಿ. ಉದ್ದಿನ ಬೇಳೆ, ಕಡಲೇ ಬೇಳೆ ಸೇರಿಸಿ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ. ಅರಿಶಿಣ ಹಾಕಿ ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಹುರಿದು ಒಲೆ ಆರಿಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ. ಬಿಸಿ ಅನ್ನ ಮಾಡಿ ಸೇರಿಸಿ ಚೆನ್ನಾಗಿ ಕಲಸಿ. ಈಗ ಕಾಯಿ ಸಾಸಿವೆ ಅನ್ನ ದೇವರ ಪ್ರಸಾದ ಮಾಡಿ ಸವಿಯಿರಿ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications