ನುಗ್ಗೆ ಸೊಪ್ಪಿನ ಪಕೋಡಾ

– ಸವಿತಾ.

 

ನುಗ್ಗೆ ಸೊಪ್ಪಿನ ಪಕೋಡಾ

ಬೇಕಾಗುವ ಸಾಮಾನುಗಳು

  • ನುಗ್ಗೆ ಸೊಪ್ಪು (ಎಲೆ) – 1/2 ಬಟ್ಟಲು
  • ಈರುಳ್ಳಿ – 1
  • ಹಸಿ ಮೆಣಸಿನಕಾಯಿ – 4
  • ಹಸಿ ಶುಂಟಿ – 1/4 ಇಂಚು
  • ಬೆಳ್ಳುಳ್ಳಿ ಎಸಳು – 4
  • ಜೀರಿಗೆ – 1/4 ಚಮಚ
  • ಓಂ ಕಾಳು (ಅಜವಾಯಿನ್) – 1/4 ಚಮಚ
  • ಕೊತ್ತಂಬರಿ ಕಾಳು – 1/2 ಚಮಚ
  • ಗರಮ್ ಮಸಾಲೆ ಪುಡಿ – 1/2 ಚಮಚ
  • ಅರಿಶಿಣ ಪುಡಿ – ಸ್ವಲ್ಪ
  • ಅಡುಗೆ ಸೋಡಾ – 1 ಚಿಟಿಕೆ
  • ಕೊತ್ತಂಬರಿ ಸೊಪ್ಪು – 6 ಕಡ್ಡಿ
  • ಕಡಲೇ ಹಿಟ್ಟು – 1 ಬಟ್ಟಲು
  • ಅಕ್ಕಿ ಹಿಟ್ಟು – 2 ಚಮಚ
  • ಉಪ್ಪು ರುಚಿಗೆ ತಕ್ಕಶ್ಟು
  • ಎಣ್ಣೆ – ಕರಿಯಲು

ಮಾಡುವ ಬಗೆ

ನುಗ್ಗೆ ಸೊಪ್ಪು ತೊಳೆದು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಈರುಳ್ಳಿ ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಜೀರಿಗೆ, ಬೆಳ್ಳುಳ್ಳಿ, ಹಸಿ ಶುಂಟಿ, ಕೊತ್ತಂಬರಿ ಕಾಳು, ಓಂ ಕಾಳು, ಸ್ವಲ್ಪ ಉಪ್ಪು ಸೇರಿಸಿ ಕಲ್ಲಿನಲ್ಲಿ ಅರೆದು ಪೇಸ್ಟ್ ಮಾಡಿ ಇಟ್ಟುಕೊಳ್ಳಿ.

ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು ಎರಡು ಒಂದು ಪಾತ್ರೆಗೆ ಹಾಕಿ ಮತ್ತು ಸ್ವಲ್ಪ ನೀರು ಸೇರಿಸಿ ಕಲಸಿ. ಕತ್ತರಿಸಿ ಇಟ್ಟುಕೊಂಡ ನುಗ್ಗೆ ಸೊಪ್ಪು, ಈರುಳ್ಳಿ ಮತ್ತು ಮಸಾಲೆ ಪೇಸ್ಟ್ ಹಾಕಿ ಕಲಸಿ. ಅಡುಗೆ ಸೋಡಾ ಹಾಕಿ, 2 ಚಮಚ ಕಾದ ಎಣ್ಣೆ ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿಕೊಳ್ಳಿ. ಸ್ವಲ್ಪ ಅರಿಶಿಣ ಪುಡಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು, ಗರಮ್ ಮಸಾಲೆ ಪುಡಿ ಹಾಕಿ ಚೆನ್ನಾಗಿ ಕಲಸಿ ಕಾದ ಎಣ್ಣೆಯಲ್ಲಿ ಒಂದೊಂದೇ ಪಕೋಡಾ ಬಿಟ್ಟು ಕರಿಯಿರಿ. ಈಗ ಬಿಸಿ ಬಿಸಿ ನುಗ್ಗೆ ಸೊಪ್ಪಿನ ಪಕೋಡಾ ಸವಿಯಿರಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.