ನವೆಂಬರ್ 3, 2020

ಸಿದ್ದರಾಮೇಶ್ವರ, Siddarameshwara

ಸಿದ್ದರಾಮೇಶ್ವರನ ವಚನದಿಂದ ಆಯ್ದ ಸಾಲುಗಳ ಓದು

– ಸಿ.ಪಿ.ನಾಗರಾಜ. ಓದುವುದು ಸದ್ಗುಣಕ್ಕಲ್ಲದೆ ಕಿವಿಯನೂದುವುದಕ್ಕೇನೋ ಅಯ್ಯಾ. (1594/706) ಓದು=ಅಕ್ಕರದ ರೂಪದಲ್ಲಿರುವ ಸಂಗತಿಗಳನ್ನು ಮತ್ತು ವಿಚಾರಗಳನ್ನು ಓದಿ ತಿಳಿವಳಿಕೆಯನ್ನು ಪಡೆಯುವುದು; ಸದ್ಗುಣಕ್ಕೆ+ಅಲ್ಲದೆ; ಸದ್ಗುಣ=ಒಳ್ಳೆಯ ನಡೆನುಡಿ; ಅಲ್ಲದೆ=ಹೊರತು; ಕಿವಿ+ಅನ್+ಊದುವುದಕ್ಕೆ+ಏನೋ; ಊದು=ಬಾಯಿಂದ ಗಾಳಿಯನ್ನು ಹೊರಡಿಸುವುದು; ಕಿವಿಯನ್ನು...