ಬಿಸ್ಕೆಟ್ ಪುಡ್ಡಿಂಗ್

– ಸವಿತಾ.

ಬಿಸ್ಕೆಟ್ ಪುಡ್ಡಿಂಗ್, biscuit pudding

ಬೇಕಾಗುವ ಸಾಮಾನುಗಳು

 • ಪಾರ‍್ಲೆ ಜಿ ಬಿಸ್ಕೆಟ್ – 2 ಪ್ಯಾಕೆಟ್
 • ಹಾಲು – 2 ಲೀಟರ್
 • ಹಾಲಿನ ಕೆನೆ – 1 ಬಟ್ಟಲು
 • ಕೋಕೋ ಪೌಡರ್ – 1 ಬಟ್ಟಲು
 • ಕತ್ತರಿಸಿದ ಹಣ್ಣು – 2 ಬಟ್ಟಲು
 • ಬಾದಾಮಿ – 1 /2 ಬಟ್ಟಲು
 • ಗೋಡಂಬಿ – 1/2 ಬಟ್ಟಲು
 • ಸಕ್ಕರೆ – 4 ಚಮಚ
 • ಚಕ್ಕೆ – 1/4 ಇಂಚು
 • ಏಲಕ್ಕಿ – 2

ಮಾಡುವ ಬಗೆ

ಹಾಲು ಕಾಯಿಸಿ ಅರ‍್ದ ಆಗುವವರೆಗೆ ಕುದಿಸಿ, ಗಟ್ಟಿಯಾದ ಹಾಲನ್ನು ಆರಲು ಬಿಡಿ. ಇದರಲ್ಲಿ ಎರಡು ಬಾಗ ಮಾಡಿ, ಮುಕ್ಕಾಲು ಬಾಗ ಹಾಲಿಗೆ, ಕೆನೆ, ಗೋಡಂಬಿ, ಬಾದಾಮಿ ಮತ್ತು ಮೂರು ಚಮಚ ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ ಇಟ್ಟುಕೊಳ್ಳಿ. ಇನ್ನೂ ಕಾಲು ಬಾಗ ಹಾಲಿಗೆ ಕೋಕೋ ಪೌಡರ್ ಮತ್ತು ಒಂದು ಚಮಚ ಸಕ್ಕರೆ ಸೇರಿಸಿ ಸ್ವಲ್ಪ ಬಿಸಿ ಮಾಡಿ ಚಾಕ್ಲೇಟ್ ಸಾಸ್ ಮಾಡಿ ಇಟ್ಟುಕೊಳ್ಳಿ.

ಬಿಸ್ಕೆಟ್ ಅನ್ನು ಮಿಕ್ಸರ್ ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ ಒಂದು ದುಂಡನೆಯ ಡಬ್ಬಿಯಲ್ಲಿ ಹಾಕಿ ಇಡಿ. ನಂತರ, ಮುಂಚೆ ತಯಾರಿಸಿಟ್ಟ ಒಣ ಹಣ್ಣು ಮಿಶ್ರಿತ ಹಾಲನ್ನು ಕಾಲು ಬಾಗ ತೆಗೆದಿಟ್ಟು, ಉಳಿದ ಹಾಲನ್ನು ಬಿಸ್ಕಿಟ್ ಪುಡಿಯ ಮೇಲೆ ಸುರಿದು, ರೆಪ್ರಿಜರೇಟರ್ ನಲ್ಲಿ ಮೂರು ಗಂಟೆ ಕಾಲ ಐಸ್ ಕ್ರೀಂ ತರಹ ಗಟ್ಟಿ ಆಗುವವರೆಗು ಇಡಬೇಕು.

ಮೂರು ತಾಸಿನ ನಂತರ ತೆಗೆದು ಸುತ್ತಲೂ ಚಾಕುವಿನಿಂದ ಕತ್ತರಿಸಿ ತೆಗೆದುಕೊಳ್ಳಿ, ಕೇಕ್ ನಂತೆ ದುಂಡಗೆ ಬರುತ್ತದೆ. ಅದರ ಮೇಲೆ ನಿಮಗೆ ಸಿಗುವ ಹಣ್ಣುಗಳನ್ನು ಕತ್ತರಿಸಿ ಹಾಕಿ. ಪಪಾಯಿ, ಕಿತ್ತಳೆ ಮತ್ತು ಬಾಳೆಹಣ್ಣನ್ನು ಬಳಸಬಹುದು. ಇದರ ಮೇಲೆ ಚಾಕೋಲೇಟ್ ಸಾಸ್ ಮತ್ತು ಒಣ ಹಣ್ಣು ಸೇರಿಸಿಟ್ಟ ಹಾಲು ಹಾಕಿ ಕತ್ತರಿಸಿ ಸರ‍್ವ್ ಮಾಡಿ.

ಕ್ರಿಸ್ ಮಸ್ ಹಬ್ಬಕ್ಕೆ ಎಲ್ಲರಿಗೂ ಇಶ್ಟ ಆಗುವ, ಮಕ್ಕಳೂ ಕೂಡ ಮಾಡಬಹುದಾದಂತಹ ಸರಳ ಮತ್ತು ಆರೋಗ್ಯಕರ ಪುಡ್ಡಿಂಗ್ ಮಾಡಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. Raghuramu N.V. says:

  ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications