ಕವಿತೆ : ಮರೆಯದಿರಿ…
– ಉಮಾ.ವಿ.
ಇಶ್ಟವಾಗದು ತಾಯಿಯ ರೀತಿ
ಕಣ್ ಕಟ್ಟಿದೆ ಪತ್ನಿಯ ಪ್ರೀತಿ
ತಿಳಿಯದು ತನಗೂ ಮುಂದೆ ಬರುವುದು ಈ ಸ್ತಿತಿ
ತಾಯಿಯ ದೂರ ಮಾಡಲು ಕೈ ಜೋಡಿಸಿದ ಪತ್ನಿಯ ಜೊತೆ ಪತಿ
ತಾಯಿಯನು ಬಿಟ್ಟಿರುವನು ವ್ರುದ್ದಾಶ್ರಮದಲ್ಲಿ
ಈ ಸತ್ಯ ಇನ್ನು ತಿಳಿದಿಲ್ಲ ತಾಯಿಗಲ್ಲಿ
ಕಾಯುತ್ತಿದ್ದಳು ಮಗ ಬರುವನೆಂದು
ಬಯಸಿದಳು ಅವನ ಜೊತೆ ಕಾಲ ಕಳೆಯಲೆಂದು
ಪತ್ನಿಯ ಆಸೆ ಕೇಳಿದ
ತಾಯಿಯ ನಂಬಿಕೆಗೆ ಮೋಸ ಮಾಡಿದ
ಆತನಿಗೂ ಮಗುವಾಯಿತು
ಅದು ದೊಡ್ಡದಾಯಿತು
ಮಗ ಹುಟ್ಟಿದ ಎಂದು ಸಂಬ್ರಮಿಸಿದ
ಕುಶಿಯಲ್ಲೇ ಊರಿಗೆಲ್ಲಾ ಊಟ ಹಾಕಿಸಿದ
ಬಂದಳು ಮನೆಗೆ ಸೊಸೆ
ಯಾರಿಗೂ ಇಶ್ಟವಾಗಲಿಲ್ಲ ಇವಳ ಒರಸೆ
ಕೊಟ್ಟಳು ಅತ್ತೆ ಮಾವನಿಗೆ ಕಶ್ಟವ
ಯಾರು ಕೇಳಲಿಲ್ಲ ಇವರ ಇಶ್ಟವ
ತನ್ನ ತಪ್ಶು ಅರಿವಾಯಿತು
ಅಶ್ಟರೊಳಗೆ ಎಲ್ಲಾ ಮುಗಿದಿತ್ತು
ಹೆತ್ತ ತಂದೆ ತಾಯಿ ದೂರಮಾಡದಿರಿ
ವ್ರುದ್ದಾಪ್ಯ ಎಲ್ಲರಿಗೂ ಸಹಜ ಮರೆಯದಿರಿ
(ಚಿತ್ರ ಸೆಲೆ: takeaslowbreath.blogspot.in)
ಇತ್ತೀಚಿನ ಅನಿಸಿಕೆಗಳು