ಕವಿತೆ: ಬಾಲ್ಯ ವಿವಾಹ
– ಉಮಾ.ವಿ.
ಓದಬೇಕೆಂಬ ಬೆಟ್ಟದಶ್ಟು ಆಸೆ
ಆಕೆಗಾಯಿತು ನಿರಾಸೆ
ಓದುವ ವಯಸ್ಸಿನಲ್ಲಿ ಓದಿಸಲಿಲ್ಲ
ಆಡುವ ವಯಸ್ಸಿನಲ್ಲಿ ಮದುವೆ ಮಾಡಿದರಲ್ಲ
ಹೊತ್ತೊಯ್ದಳು ಬಣ್ಣದ ಕನಸು ಗಂಡನ ಮನೆಗೆ
ನುಚ್ಚು ನೂರಾಯ್ತು ತನ್ನ ಕನಸು ಕೊನೆಗೆ
ಗಂಡನ ಮನೆಯಲ್ಲಿ ಕಿರುಕುಳ
ಮನೆಯಲ್ಲಿ ಹೇಳಲು ತಳಮಳ
ಸರಿ-ತಪ್ಪು ತಿಳಿಯದಾಗಿದೆ
ಏನು ಮಾಡಬೇಕೆಂದು ತೋಚದಾಗಿದೆ
ಗಂಡನ ಅತಿಯಾದ ಕುಡಿತವೇ
ಅದರಿಂದ ಹೆಂಡತಿಯಾದಳು ವಿದವೆ
ಓದಬೇಕಿತ್ತೆಂದು ತನಗನಿಸಿತು
ಅಶ್ಟರೊಳಗೆ ಕಾಲ ಮಿಂಚಿತ್ತು
ದಯವಿಟ್ಟು ಬಾಲ್ಯ ವಿವಾಹ ನಿಲ್ಲಿಸಿ
ಹೆಣ್ಣುಮಕ್ಕಳಿಗೆ ಒಳ್ಳೆಯ ಜೀವನ ಕಲ್ಪಿಸಿ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು