ಕವಿತೆ: ಸರ‍್ವಕಾಲಿಕ ಸತ್ಯ
ದೇವನೆಲ್ಲಿಹನೆಂದು ಅಹರ‍್ನಿಶಿ
ಹುಡುಕದಿರು ನೀನು
ಕಟ್ಟಿರುವ ಕಲ್ಲಿನ ಗುಡಿಯಲ್ಲಿ
ಅರ‍್ಚಿಸದಿರು ನೀನು
ಬಡವರ ಕಂಬನಿಯಲ್ಲಿ
ಸುರಿವ ನೀರಾಗಿರುವನು
ಮಾತ್ರುವಿನ ವಾತ್ಸಲ್ಯವ
ಮರೆಯದಿರು ನೀನು
ಚಿತ್ತದಲಿ ಶಾಂತ ಮೂರ‍್ತಿಯಾಗಿ
ಮೌನದಿ ನೆಲೆಸಿಹನು
ದರ‍್ಪದಿ ಕೋಪವನು
ತೋರ‍್ಪಡಿಸದಿರು ನೀನು
ಸುರಿಯುವ ಬೆವರಿನ
ಹನಿಯಲ್ಲಿ ಕಾಣುತಿಹನು
ಸಹಾಯ ಹಸ್ತ ತೋರಿದವರ
ತೊರೆಯದಿರು ನೀನು
ಅಬಿನವನ ನುಡಿಯಿಂದು
ಸರ‍್ವಕಾಲಿಕ ಸತ್ಯ
ರಬಸದಲ್ಲಿನ ನದಿಯಾಗಿ
ಹರಿಯದಿರು ನೀನು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು