ಕವಿತೆ: ಅನುರಾಗದ ಕುಸುಮಗಳು

– ವಿನು ರವಿ.

nature

ಎಲ್ಲೆಲ್ಲೂ ಎಳೆ ಹಸಿರು ಚಿಗುರು
ರಮ್ಯವಾಗಿದೆ ಹೊಚ್ಚ ಹೊಸ ತಳಿರು

ಬಾನಂಗಳದಿ ಹೊನ್ನ ಬಣ್ಣದ
ಬೆಳಕಿನ ಬಣ್ಣದ ತೇರು

ಇಬ್ಬನಿಯ ಮರೆಯಲಿ
ನಗುತಿದೆ ತರಗುಟ್ಟುವ ತಂಬೆಲರು

ಮರಗಿಡದ ನಡುವೆ ತೂರಿ
ಹಾಯಾಗಿ ಒರಗಿದೆ ಹೊಂಬಿಸಿಲು

ಚೈತ್ರ ಹೊತ್ತು ತಂದ
ನರುಗಂಪಿನ ಸೊಂಪಿಗೆ
ತಲೆದೂಗಿವೆ ದುಂಬಿಗಳು

ಮಾಮರದ ಮರೆಯಲ್ಲೆ
ಗುನುಗುತಿವೆ ಗಿಳಿ ಗೊರವಂಕಗಳು

ಮನದೊಳಗೆ ಮಿಡಿಯುತ್ತಿವೆ
ಬಾವ ನೂಪುರದ ಸ್ವರಗಳು

ಮೌನದಲೆ ಬಿರಿಯುತ್ತಿವೆ
ಅನುರಾಗದ ಕುಸುಮಗಳು

(ಚಿತ್ರ ಸೆಲೆ: stuartwilde.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications OK No thanks