ಕವಿತೆ: ಮಮತೆಯ ಮಡಿಲು

– ಶ್ಯಾಮಲಶ್ರೀ.ಕೆ.ಎಸ್.

ತಾಯಿ

ನೀ ಹುಟ್ಟಿದ ಮರುಕ್ಶಣವೇ
ಅಮ್ಮನ ಜೀವಕೆ ಮರುಹುಟ್ಟು
ಬಚ್ಚಿಟ್ಟ ಕನಸೊಂದು ಚಿಗುರೊಡೆಯಿತು
ನೀ ನೋಡುತಿರಲು ಪಿಳ ಪಿಳ ಕಣ್ಬಿಟ್ಟು

ನಿನ್ನ ಆಗಮನಕ್ಕಾಗಿ ಹಾತೊರೆಯುತ್ತಿರಲು ಮನ
ಮಾತೆಯ ಮಡಿಲಾಯಿತು ನಿನಗೆ ಸಿಂಹಾಸನ
ನಿನಗರಿಯದ ಪ್ರಪಂಚ
ತಾಯಿಯ ಮಮತೆಯೇ ನಿನಗೆ ರಕ್ಶಾಕವಚ

ಬಣ್ಣಿಸಲಾಗದ ಅನುಬವ
ನಿನ್ನ ಮೊದಲ ಸ್ಪರ‍್ಶ
ತೋರಲಾಗದ ಬಾವ
ಜೀವಕ್ಕೊಂದು ಜೀವ ನೀಡಿದ ಹರ‍್ಶ

ನಿನ್ನ ಹಸಿವಿನ ಅಳುವು
ಮಿಡಿಯುವುದು ಮನದಾಳದಲ್ಲಿ ನೋವು
ನೀ ಬೀರುವ ಕಿರುನಗೆ
ಮೂಡಿಸುವುದು ಮೊಗದಲ್ಲಿ ಬರವಸೆಯ ನಗುವು

ಅಮ್ಮನ ತೋಳಿನ ಅಪ್ಪುಗೆಯೇ
ನಿನಗೆ ಬೆಚ್ಚನೆಯ ಹೊದಿಕೆ
ಮುಗ್ದ ಮನದ ಹಸುಳೆಯೇ
ಜಗವ ಮರೆವಳು ಜನ್ಮದಾತೆ
ನಿನಗೆ ಮಾಡುತ ಆರೈಕೆ

 

( ಚಿತ್ರ ಸೆಲೆ:  pixabay.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: