ಹನಿಗವನಗಳು: ಬನ್ನಿ ಹಬ್ಬ

– ವೆಂಕಟೇಶ ಚಾಗಿ.

*** ಹಬ್ಬ ***

ಆದುನಿಕ ಯುಗದಲ್ಲಿ
ಹತ್ತಿರವಿದ್ದರೂ ದೂರ
ಮರೆಯುವಶ್ಟು ಹೆಸರಾ
ಹಬ್ಬದ ನೆಪದಲ್ಲಿ
ಮತ್ತೆ ನೆನಪಿಸಿತು
ಪರಿಚಿತ ಮುಕಗಳ
ನಾಡಹಬ್ಬ ದಸರಾ

*** ಸಂಬಂದ ***

ನಿಜವಾದ ಸಂಬಂದಗಳು
ಎಂದಿಗೂ ಮುರಿಯಲ್ಲ
ಇರಬೇಕು ಕಾತ್ರಿ
ದ್ವೇಶ ಅಳಿದು ಸ್ನೇಹ ಬೆಳೆದು
ಸಂತಸ ತರಲಿ
ಈ ಬಾರಿಯ ನವರಾತ್ರಿ

*** ಬಂಗಾರ ***

ಅತ್ತೆ ಸೊಸೆಯ ನಡುವೆ
ಜಗಳ ತಂದಿತ್ತು ಆ ದಿನ
ಗುಂಜಿ ಬಂಗಾರ
ಅತ್ತೆಗೂ ಸೊಸೆಗೂ
ಬಂದ ಬೆಸೆಯಿತು ಈ ದಿನ
ಬನ್ನಿ ಬಂಗಾರ

*** ಬನ್ನಿ ***

ದಸರೆಯ ದಿನದಂದು
ಹಬ್ಬದ ನೆಪದಲ್ಲಿ
ಮುನಿಸು ಮರೆಯೋಣ ಬನ್ನಿ
ಬಂಗಾರದಂಗೆ ಇರೋಣ
ನಾವು ನೀವೆಲ್ಲ
ಹೋಳಾಗದಿರಲಿ ಈ ಸ್ನೇಹ ಅನ್ನಿ

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks