ಕವಿತೆ: ಕವಿತೆಯಲ್ಲವೇ

ಶಿವಮೂರ‍್ತಿ. ಹೆಚ್. ದಾವಣಗೆರೆ

ಮನಸು, Mind

 ಹ್ರುದಯದ ಮನದೊಳಗೆ
ಬಾವಗಳ ಸಮ್ಮಿಲನದಿ
ಜೀವ ಪಡೆಯುವುದು
ಕವಿತೆಯಲ್ಲವೇ

ಪದಪದಗಳನ್ನೆಲ್ಲ
ಹದವಾಗಿ ಬೆರೆಸಿದಾಗ
ಚೆಂದವಾಗಿ ಮೂಡುವುದು
ಕವಿತೆಯಲ್ಲವೇ

ಅಕ್ಕರಗಳನ್ನೆಲ್ಲ
ಅಕ್ಕರೆಯಲಿ ಜೋಡಿಸಿದಾಗ
ಸಕ್ಕರೆ ಪಾಕದಂತಾಗುವುದು
ಕವಿತೆಯಲ್ಲವೇ

ಜೀವನದ ಅನುಬವಗಳ
ನವನೀತವನು ಕಡೆದಾಗ
ಕಾವ್ಯ ಅಮ್ರುತವಾಗುವುದು
ಕವಿತೆಯಲ್ಲವೇ

ನೋವು ನಲಿವುಗಳ
ಕಾವಿನಲ್ಲಿ ಬೆಂದಂತಹ
ಕವಿಯು ಕಟ್ಟುವುದು
ಕವಿತೆಯಲ್ಲವೇ

ತೋಚಿದೊಡನೆ
ಗೀಚಿ ಬರೆದಾಗ
ಹೊಚ್ಚ ಹೊಸದೆನಿಸುವುದು
ಕವಿತೆಯಲ್ಲವೇ

ಯಾರು ಹೊಗಳಿದರೇನು
ಯಾರು ತೆಗಳಿದರೇನು
ನೂರು ಬಾರಿ ಬರೆಯಬೇಕೆನಿಸುವುದು
ಕವಿತೆಯಲ್ಲವೇ

( ಚಿತ್ರ ಸೆಲೆ:   sloanreview.mit.edu‌ ‌ )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Raghuramu N.V. says:

    ಚೆನ್ನಾಗಿದೆ

  2. shivamurthy H says:

    ಹೃತ್ಪೂರ್ವಕ ಕೃತಜ್ಞತೆಗಳು ಸರ್

ಅನಿಸಿಕೆ ಬರೆಯಿರಿ: