ಮೆಂತ್ಯ ಉಂಡೆ
– ಸವಿತಾ.
ಬೇಕಾಗುವ ಸಾಮಾನುಗಳು
- ಮೆಂತ್ಯ ಕಾಳು – 2 ಚಮಚ
- ಸೋಂಪು ಕಾಳು – 2 ಚಮಚ
- ಏಲಕ್ಕಿ – 2
- ಗಸಗಸೆ – 1/2 ಚಮಚ
- ಕರಿ ಮೆಣಸಿನ ಕಾಳು – 4
- ಬಾದಾಮಿ – 10
- ಒಣ ಶುಂಟಿ – 1/4 ಇಂಚು
- ಗೋದಿ ಹಿಟ್ಟು – 1 ಲೋಟ
- ತುಪ್ಪ – 1/4 ಲೋಟ
- ಬೆಲ್ಲದ ಪುಡಿ – 1 ಲೋಟ
ಮಾಡುವ ಬಗೆ
ಮೆಂತ್ಯ ಕಾಳು ಮತ್ತು ಸೋಂಪು ಕಾಳನ್ನು ಹುರಿದು ತೆಗೆದಿಟ್ಟುಕೊಳ್ಳಿ. ನಂತರ ಏಲಕ್ಕಿ, ಗಸಗಸೆ, ಮೆಣಸಿನ ಕಾಳು, ಸ್ವಲ್ಪ ಒಣ ಶುಂಟಿ ಹುರಿದು ತೆಗೆದಿಡಿ. ಹತ್ತು ಬಾದಾಮಿ ಬೀಜಗಳನ್ನು ಬೇರೆಯಾಗಿ ಸ್ವಲ್ಪ ಹುರಿದು ತೆಗೆದಿಡಿ. ಆರಿದ ಬಳಿಕ ಹುರಿದಿಟ್ಟ ಎಲ್ಲವನ್ನೂ ಸೇರಿಸಿ ಮಿಕ್ಸರ್ ನಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ.
ಗೋದಿ ಹಿಟ್ಟು ತುಪ್ಪ ಹಾಕಿ ಹುರಿಯಿರಿ. ಬೆಲ್ಲದ ಪುಡಿ, ಮೂರು ಚಮಚದಶ್ಟು ನೀರು ಹಾಕಿ ಬೆಲ್ಲ ಕರಗಿಸಿ. ಪಾಕ ಆಗುವಶ್ಟು ಬಿಸಿ ಮಾಡುವುದು ಬೇಡ, ಮಾಡಿದರೂ ಒಂದೆಳೆ ಪಾಕ ಮಾತ್ರ ಸಾಕು. ಗೋದಿ ಹಿಟ್ಟು ಮತ್ತು ಮೊದಲೇ ಮಾಡಿಟ್ಟ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ಉಂಡೆ ಕಟ್ಟಿ ಇಟ್ಟುಕೊಳ್ಳಿ. ಪೌಶ್ಟಿಕ ಮೆಂತ್ಯ ಉಂಡೆ ಸವಿಯಲು ಸಿದ್ದ.
ಇತ್ತೀಚಿನ ಅನಿಸಿಕೆಗಳು