ಕವಿತೆ: ಕೊಳಲು

– .

 

ಕೊಳಲು, flute

ಕೊಳಲು ನೋಡಿದೆ
ಹರಿಯ ಕೊಳಲು ನೋಡಿದೆ
ಸೆಳೆದಿದೆ ಕಂಗಳ ನೋಟವನಿಂದು
ಬಳಿಯಲಿ ನಾದವನಾಲಿಸೆ ಬಂದು

ತನುವನು ತಂಪು ಮಾಡಿದೆ ಕೊಳಲು
ಮನವನು ಮುದಗೊಳಿಸಿದ ಕೊಳಲು
ಬನದಲಿ ಬ್ರುಂಗವ ನಲಿಸಿದ ಕೊಳಲು
ಚಣದಲಿ ಮೋಹವ ತರಿಸುವ ಕೊಳಲು

ಹರಿಯನು ತುತಿಸಿ ನಿಂತಿದೆ ಕೊಳಲು
ಶರದಿಯ ಮದ್ಯದಿ ನುಡಿದಿದೆ ಕೊಳಲು
ಸುರರಲಿ ಬಕ್ತಿಯ ಬಿತ್ತಿದ ಕೊಳಲು
ಸ್ವರದಲಿ ಗಾನವ ತೋರಿದ ಕೊಳಲು

ಪದುಮನ ಹ್ರುದಯವ ತಣಿಸಿದ ಕೊಳಲು
ಪದದಲಿ ಬಾರತ ಗೀತೆಯೆ ಕೊಳಲು
ಕದನವ ಗೈಯದ ಅಂದದ ಕೊಳಲು
ಮದನನೆ ಮಾದವ ಗೋಪಿಯ ಕೊಳಲು

ಶುಬದೊಳು ಮಂಗಳ ನಾದವು ಕೊಳಲು
ಸಬೆಯಲಿ ಮಾನವ ಕಾದಿಹ ಕೊಳಲು
ವಿಬುವಿನ ತೆರದಲಿ ಮೆರೆಯದ ಕೊಳಲು
ಅಬಿನವಗೊಲಿದಿಹ ಕ್ರಿಶ್ಣನ ಕೊಳಲು

( ಚಿತ್ರ ಸೆಲೆ : tell-a-tale.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *