ಬುರ‍್ಜ್ ಆಲ್ ಬಾಬಾಸ್- ಪರಿತ್ಯಕ್ತ ಕೋಟೆಮನೆಗಳು

– .

Burj al babas

ವಿಶ್ವದ ಪ್ರತಿಯೊಂದು ರಾಶ್ಟ್ರಗಳಲ್ಲೂ ಒಂದಿಲ್ಲೊಂದು ಬೆರಗುಗೊಳಿಸುವ ಪ್ರಾಚೀನ ತಾಣಗಳನ್ನು ಕಾಣಬಹುದು. ಪ್ರತಿ ರಾಶ್ಟ್ರದ ಪ್ರಜೆಗಳು, ವಿದೇಶೀಯರು ಅವುಗಳನ್ನು ನೋಡಲು ಹಾತೊರೆಯುತ್ತಿರುತ್ತಾರೆ. ಈ ವಿಚಾರದಲ್ಲಿ ಟರ‍್ಕಿ ದೇಶ ಅನನ್ಯ. ಇಲ್ಲಿ ಪ್ರಾಚೀನ, ಐತಿಹಾಸಿಕ ಸ್ಮಾರಕಗಳು, ನೈಸರ‍್ಗಿಕ ದ್ರುಶ್ಯಾವಳಿಗಳು, ಬೂದ್ರುಶ್ಯಗಳು, ಸಾಂಸ್ಕ್ರುತಿಕ ಸಂಯೋಜನೆಗಳು ಹೇರಳವಾಗಿದೆ. ಇಸ್ತಾಂಬುಲ್‍ನ ಬೈಜಾಂಟೈನ್ ಮತ್ತು ಒಟ್ಟೋಮನ್ ವೈಬವಗಳು ಇದಕ್ಕೆ ಸಾಕ್ಶಿ. ಇವುಗಳಲ್ಲದೆ ಟರ‍್ಕಿಯಲ್ಲಿ ಇನ್ನೂ ಅನೇಕ ಮೈನವಿರೇಳಿಸುವಂತಹ ಇತಿಹಾಸ ಪ್ರಸಿದ್ದ ಸ್ತಳಗಳಿವೆ. ಇಲ್ಲಿನ ಪಮ್ಯೂಕಲೆ ಮತ್ತು ಕಪ್ಪಾಡೋಸಿಯಾವನ್ನು ನೋಡಿದಲ್ಲಿ ಟರ‍್ಕಿಯಲ್ಲಿನ ಆಕರ‍್ಶಕ ತಾಣಗಳು ಎಶ್ಟು ಸಮ್ರುದ್ದಿಯಾಗಿವೆ ಎಂದು ಅಂದಾಜಿಸಬಹುದು.

ಎರಡು ನೂರು ಮಿಲಿಯನ್ ಡಾಲರ್ ಬೆಲೆ ಹೊಂದಿರುವ ಪರಿತ್ಯಕ್ತ ಬುರ‍್ಜ್ ಆಲ್ ಬಾಬಾಸ್ ಹಳ್ಳಿ ಟರ‍್ಕಿಯ ಹಲವು ವಿಸ್ಮಯಗಳಲ್ಲಿ ಒಂದು. ನೂತನವಾಗಿ ನಿರ‍್ಮಿಸಲ್ಪಟ್ಟಿರುವ ಈ ಸುಂದರ ವಿನ್ಯಾಸದ ಮನೆಗಳನ್ನು ತೊರೆಯಲು ಕಾರಣವೇನೆಂದು ತಿಳಿದರೆ ಆಶ್ಚರ‍್ಯವಾಗುತ್ತದೆ. ಬುರ‍್ಜ್ ಆಲ್ ಬಾಬಾಸ್ ಹಳ್ಳಿಯ ಮನೆಗಳನ್ನು ಗಮನಿಸಿದರೆ ಅಲ್ಲಿರುವ ಪ್ರತಿಯೊಂದು ಮನೆಯೂ ಒಂದೇ ವಿನ್ಯಾಸವನ್ನು ಹೊಂದಿರುವಂತೆ ಕಾಣುತ್ತದೆ. ಇದು ನಿಜವೂ ಹೌದು. ಅಲ್ಲಿರುವ ಪ್ರತಿಯೊಂದು ಮನೆಯನ್ನೂ ಒಂದೇ ನೀಲನಕ್ಶೆಯ ಆದಾರದ ಮೇಲೆ ನಿರ‍್ಮಿಸಲಾಗಿದೆ. ಇದು ಡಿಸ್ನಿ ಚಲನಚಿತ್ರದಲ್ಲಿ ಹಳ್ಳಿಯಂತೆ ಕಾಣುವುದೊಂದು ವಿಶೇಶ.

ಇಲ್ಲಿ ಮನೆಗಳನ್ನು ನಿರ‍್ಮಿಸುವ ಯೋಜನೆಯು 2014ರಲ್ಲಿ ಪ್ರಾರಂಬವಾಗಿದ್ದು, ಇವನ್ನು ಐಶರಾಮಿ ವಸತಿಗಳ ಸಂಕೀರ‍್ಣ ಎಂದು ಬಿಂಬಿಸುವ ಕಾರ‍್ಯಕ್ರಮದೊಡನೆ ಮಾರಾಟ ಮಾಡಲು ಯೋಜಿಸಲಾಗಿತ್ತು. ಅದರಂತೆ ಅದರ ನಿರ‍್ಮಾಣ ಆಗಿತ್ತು. ಈ ವಸತಿ ಸಂಕೀರ‍್ಣದಲ್ಲಿ ಅಂಗಡಿ ಮುಗ್ಗಟ್ಟುಗಳಿಗೆ, ಚಿತ್ರಮಂದಿರಗಳಿಗೆ, ರೆಸ್ಟೋರೆಂಟ್‍ಗಳಿಗೆ, ಕನ್ಸರ‍್ಟ್ ಮತ್ತು ಕಾನ್ಪೆರೆನ್ಸ್ ಹಾಲ್ಗಳು ಇವುಗಳೊಂದಿಗೆ ಅಲ್ಲಿ ಐದು ನೂರ ಎಂಬತ್ತೇಳು ಪ್ರೆಂಚ್ ಶೈಲಿಯ ಅರಮನೆಯಂತಹ ಮನೆಗಳನ್ನು ನಿರ‍್ಮಿಸಲು ಉದ್ದೇಶಿಸಲಾಗಿತ್ತು. ಇದು ಪ್ರಾರಂಬವಾದ ನಂತರದ ದಿನಗಳಲ್ಲಿ ಇದರ ಪ್ರಾಯೋಜಕರು ತಾವು ದಿವಾಳಿಯಾಗುವುದನ್ನು ತಪ್ಪಿಸಿಕೊಳ್ಳವ ಸಲುವಾಗಿ , ಅರ‍್ಜಿ ಸಲ್ಲಿಸಿದ ನಂತರ, ಈ ಯೋಜನೆಯನ್ನು ಸ್ತಗಿತಗೊಳಿಸಿದರು. ದಿವಾಳಿಯಾಗುವ ಮುನ್ನ ಇದರ ಆಯೋಜಕರು ಎರಡು ನೂರು ಮಿಲಿಯನ್ ಡಾಲರ್ ಬೆಲೆ ಬಾಳುವ 587 ಮನೆಗಳನ್ನು ಪೂರ‍್ಣಗೊಳಿಸಿದ್ದರು. ಇದರಲ್ಲಿ 350 ವಿಲ್ಲಾಗಳು ಮಾರಾಟವಾಗಿದ್ದವು. ಪ್ರತಿ ವಿಲ್ಲಾಗಳೂ 400 ಸಾವಿರ ಡಾಲರ‍್ನಿಂದ 500 ಸಾವಿರ ಡಾಲರ್ ಮೌಲ್ಯದ್ದಾಗಿತ್ತು. ಸುಮಾರು ವಿಲ್ಲಾಗಳು ಮಾರಾಟವಾಗಿದ್ದರೂ ವಾಸಕ್ಕೆ ಯಾರೂ ಬರದಿದ್ದ ಕಾರಣ ಈ ಹಳ್ಳಿ ‘ಬುರ‍್ಜ್ ಆಲ್ ಬಾಬಾಸ್’ ಹಾಳು ಬಿದ್ದಿತು.

2015ರಲ್ಲಿ ಈ ಹಳ್ಳಿಯನ್ನು ಯುನಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಯಿದೆ. ಪೈನ್ ಕಾಡುಗಳು, ಉಶ್ಣ ಬುಗ್ಗೆಗಳು, ಐತಿಹಾಸಿಕ ಬೂ ದ್ರುಶ್ಯಗಳಿಗೆ ಈ ಪ್ರದೇಶ ಹೆಸರುವಾಸಿಯಾಗಿದೆ.

( ಮಾಹಿತಿ ಮತ್ತು ಚಿತ್ರ ಸೆಲೆ: flynote.com , wikimapia.org )

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: