ಕವಿತೆ: ಬಾಳಿನ ನಾಟಕ
ಜೀವನವೆಂಬುವ
ಕವಲು ದಾರಿಯಲಿ
ದೇವರ ನೆನೆಯುತ
ನಾವೆಲ್ಲರು ಹೊರಟಿರಲು
ಯಾವ ಬಯ ನಮಗಿಲ್ಲ
ಕಶ್ಟ ಸುಕಗಳ
ಕಲ್ಲು ಮುಳ್ಳಿನ
ಕವಲು ದಾರಿಯಲಿ
ಎಶ್ಟೇ ನೋವಾದರೂ
ಬಾಳ ಪಯಣ ನಿಲ್ಲುವುದಿಲ್ಲ
ತಾಯ್ತಂದೆಯರು
ಒಡ ಹುಟ್ಟಿದವರು
ಬಂದು ಮಿತ್ರರಿಲ್ಲದೇ
ಏಕಾಂಗಿ ಸಂಚಾರಿಯಾದರೂ
ಬಾಳಯಾನ ಸಾಗಬೇಕಲ್ಲ
ಸ್ರುಶ್ಟಿಕರ‍್ತ ಸ್ರುಶ್ಟಿಸಿದ
ಸೂತ್ರದ ಗೊಂಬೆಗಳಾಗಿ
ಪಾತ್ರಾಬಿನಯವ ಮಾಡುತ
ಬಾಳಿನ ನಾಟಕವ ಮುಗಿಸಿ
ನಾವೆಲ್ಲರೂ ಹೋಗಬೇಕಲ್ಲ
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು