ಕವಿತೆ: ನಗೆ ಹೊನಲು

– ಶ್ಯಾಮಲಶ್ರೀ.ಕೆ.ಎಸ್.

laugh

ನಗುವಿಗೊಂದು ಸಲಾಮು
ಮನದ ಹುಣ್ಣಿಗೆ ನಗುವೇ ಮುಲಾಮು
ಮನೋಲ್ಲಾಸವು ನಗುವಿತ್ತ ಇನಾಮು

ಚೆಂದದ ಮೊಗಕೆ ನಗುವೇ ಆಬರಣ
ಮಗುವಿನ ನಿಶ್ಕಲ್ಮಶ ನಗುವದು ಸಿಹಿ ಹೂರಣ
ಸ್ವಸ್ತ ಜೀವನಕೆ ಸಂತಸದ ನಗುವೇ ಕಾರಣ

ನಗುವಲ್ಲಿದೆ ನಾನಾ ಪರಿಯು
ನಗುವಿನೊರತೆಯೇ ಬದುಕಿಗೆ ಸಿರಿಯು
ನಗುವಿಂದಲೇ ನೋವಿಗೆ ಕೊನೆಯು

ಹರಿಯುತಿರೆ ನಗೆ ಹೊನಲು
ಕಣ್ಮರೆಯಾಗುವುದು ಅಂತರಂಗದ ಅಳಲು
ದೂರಸರಿಯುವುದು ದಿಗಿಲು

ನೊಂದ ಮನಸ್ಸಿಗೆ ನಗೆಯೇ ಗುಳಿಗೆ
ನಗೆಯಿಲ್ಲದೆ ಸಾರವಿಲ್ಲ ಬದುಕಿಗೆ
ನಗುತ ನಗಿಸುತ ಸಾಗುವ ಬಾಳಪಯಣದೆಡೆಗೆ

(ಚಿತ್ರ ಸೆಲೆ: kalw.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: