ಕವಿತೆ: ನಾ ಒಂಟಿಯಲ್ಲ

– ಶ್ವೇತ ಪಿ.ಟಿ.

ಒಲವು, Love

ಕೈಹಿಡಿದು ನಡೆದಾಗ
ಹೂವಾದ ದಾರಿ
ಸಾಗದಾಗಿದೆ ಈಗ
ನಿನ ಸನಿಹ ಕೋರಿ

ನೆನೆದಶ್ಟು ಸವಿಯುಣಿಸಿ
ಕಳೆದ ಪ್ರತಿ ಕ್ಶಣವೂ
ಮೂಡಿಸಿದೆ ಮೊಗದಲ್ಲಿ
ಮುಗುಳ್ನಗೆಯ ಚೆಲುವು

ಬರ ಬಾರದೆ ನೀನು
ನನ್ನೆದೆಯ ಗೂಡಿಗೆ
ಹ್ರುದಯವನು ತೆರೆದಿಟ್ಟು
ಕಾಯ್ದಿರುವೆ ಒಲವಿಗೆ

ನಿನ ನೆನಪ ಗೆಳೆತನದಲಿ
ನಾ ಒಂಟಿಯಲ್ಲ
ಜನುಮ ಜನುಮಕು ನಿನ್ನೆ
ಬೇಡಿರುವೆ ನಲ್ಲ

( ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: