ಈರುಳ್ಳಿ ಚಟ್ನಿ

– ಸವಿತಾ.

onion chutney, ಈರುಳ್ಳಿ ಚಟ್ನಿ

ಬೇಕಾಗುವ ಸಾಮಾನುಗಳು

  • ಈರುಳ್ಳಿ – 3
  • ಒಣ ಮೆಣಸಿನಕಾಯಿ – 7-8
  • ಬೆಳ್ಳುಳ್ಳಿ – 4 ಎಸಳು
  • ಮೆಂತೆ ಕಾಳು – 1/4 ಚಮಚ
  • ಕೊತ್ತಂಬರಿ ಕಾಳು – 1 ಚಮಚ
  • ಹುಣಸೇ ಹಣ್ಣು – 1/2 ನಿಂಬೆ ಹಣ್ಣಿನ ಅಳತೆಯಶ್ಟು
  • ಸಾಸಿವೆ – 1/4 ಚಮಚ
  • ಉದ್ದಿನ ಬೇಳೆ – 1 ಚಮಚ
  • ಇಂಗು – 1 ಚಿಟಿಕೆ
  • ಕರಿಬೇವು ಎಲೆ – 5-6 ಎಲೆ
  • ಬೆಲ್ಲದ ಪುಡಿ – 2 ಚಮಚ (ಬೇಕಿದ್ದರೆ)
  • ಎಣ್ಣೆ – 4 ಚಮಚ
  • ಅರಿಶಿಣ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಎರಡು ಚಮಚ ಎಣ್ಣೆ ಬಾಣಲೆಗೆ ಹಾಕಿ ಬಿಸಿ ಮಾಡಿ. ಮೆಂತ್ಯೆ ಕಾಳು ಮತ್ತು  ಕೊತ್ತಂಬರಿ ಕಾಳುಗಳನ್ನು ಸೇರಿಸಿ ಹುರಿದು ತೆಗೆಯಿರಿ. ಬೆಳ್ಳುಳ್ಳಿ ಎಸಳು, ಒಣ ಮೆಣಸಿನಕಾಯಿ ಹುರಿದು ತೆಗೆಯಿರಿ. ಹುಣಸೇ ಹಣ್ಣು ನೆನೆಸಿ ರಸ ತೆಗೆದು ಇಟ್ಟುಕೊಳ್ಳಿ. ಈರುಳ್ಳಿ ಸಣ್ಣಗೆ ಕತ್ತರಿಸಿ ಅದೇ ಬಾಣಲೆಗೆ ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ. ಆರಿದ ನಂತರ ಹುಣಸೇ ರಸ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ.

ಅದೇ ಬಾಣಲೆಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ಒಗ್ಗರಣೆ ಕೊಡಿ. ಸಾಸಿವೆ, ಇಂಗು, ಕರಿಬೇವು, ಉದ್ದಿನ ಬೇಳೆ ಹಾಕಿ ಹುರಿಯಿರಿ. ಸ್ವಲ್ಪ ಉಪ್ಪು, ಅರಿಶಿಣ ಮತ್ತು ರುಬ್ಬಿದ ಮಿಶ್ರಣವನ್ನು ಸೇರಿಸಿ ಸ್ವಲ್ಪ ನೀರು, ಬೆಲ್ಲ ಹಾಕಿ ಒಂದು ಕುದಿ ಕುದಿಸಿ ಇಳಿಸಿ.

ಈಗ ಈರುಳ್ಳಿ ಚಟ್ನಿ ಸವಿಯಲು ಸಿದ್ದ. ದೋಸೆ, ಚಪಾತಿ, ಅನ್ನ ಇಲ್ಲವೇ ಇಡ್ಲಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: