‘ನಿನ್ನ ಎದುರು ಆ ದೇವರು ಶರಣಾಗಿಹನಲ್ಲ’

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಜೀವನದ ಪುನರಾರಂಬ ***

ಮತ್ತೆ ಶುರು ಮಾಡಬೇಕಿದೆ ಶುರುವಿನಿಂದ
ದೂರವಾಗಿ ನಿನ್ನ ನೆನಪಿನಿಂದ
ನೋಡದೆ ನಿನ್ನ ಮುಕಾರವಿಂದ
ಜೀವಿಸಬೇಕಿದೆ ನನ್ನ ತಂದೆ ತಾಯಿಗಾಗಿ
ಮತ್ತೆ ಶುರುವಿನಿಂದ

*** ಅಪ್ಪ ***

ನಮ್ಮನು ಬೆಳೆಸುವುದರಲ್ಲೆ ಜೀವವ ಸವೆಸಿದೆ
ಎದುರಲಿ ಒರಟು ಎನಿಸಿದೆ
ಮರೆಯಲಿ ನಿಂತು ಸಂತಸ ಪಟ್ಟೆ
ಹೆಸರಿಗೆ ಮಾತ್ರ ಅಪ್ಪನಾದೆ
ಪ್ರೀತಿಯಲ್ಲಿ ಎಲ್ಲರನ್ನೂ ಮೀರಿಸಿದೆ
ನಿನ್ನ ಹೋಲಿಸಲು ಇಲ್ಲಾರು ಇಲ್ಲ
ನಿನ್ನ ಎದುರು ಆ ದೇವರು ಶರಣಾಗಿಹನಲ್ಲ

*** ಗುರು ***

ತಂದೆ ತಾಯಿ ನಂತರ
ಬುದ್ದಿಯ ಕಲಿಸಿದವರು ಗುರು
ವಿದ್ಯೆ ಬುದ್ದಿಯ ಕಲಿಸುತ
ನಮ್ಮನು ಸರಿ ದಾರಿಗೆ ತಂದಿಹರು
ಬ್ರಹ್ಮನ ಹಣೆಬರಹವ
ಬದಲಾಯಿಸಬಲ್ಲರಿವರು
ಗಾಳಿಪಟದ ಸೂತ್ರದಾರನಂತೆ
ಮರೆಯಲಿ ನಿಂತಿಹರು
ಶಿಶ್ಯರ ಯಶಸ್ಸಿನಲ್ಲಿ
ತಮ್ಮ ಯಶಸ್ಸನ್ನು ಕಂಡಿಹರು

*** ಬಿಸಿ ಚಹಾ ***

ಮುಂಜಾನೆಯ ಎಳೆ ಬಿಸಿಲಿನಲ್ಲಿ
ಮಂಜಿನ ಹನಿಯ ಜೊತೆಯಲ್ಲಿ
ಚಹಾದ ಕಪ್ಪೊಂದು ಕೈಲಿರಲು
ಸುಡುವ ಚಹಾವ ತುಟಿಗಪ್ಪಿಸಲು
ಬರುತಲಿದೆ ಹೊಸದೊಂದು ಹುಮ್ಮಸ್ಸು
ಹೋಗಲಾಡಿಸಿ ಮನಸಿನ ತಮಸ್ಸು

(ಚಿತ್ರಸೆಲೆ : professionalstudies.educ.queensu.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: