ಕವಿತೆ: ಚೈತನ್ಯ
ಮಳೆಯಲಿ ತೋಯ್ದು
ಹಸಿರುಟ್ಟು ನಿಂತ
ಬೆಟ್ಟದ ಸಾಲುಗಳ
ಒಡಲಲ್ಲಿ ಬವ್ಯ ರೂಪಿ
ಹಸಿರೆಲೆಯ ತೆರೆಗಳ
ನಡುವೆ ತಲೆ ಎತ್ತಿನಿಂತ
ಬಣ್ಣದ ಹೂವಿನ
ಪಕಳೆಯಲ್ಲಿ ರಮ್ಯ ರೂಪಿ
ಎದೆ ಹಾಲುಂಡು
ತಾಯ ಮಡಿಲಿನಲಿ
ಮಲಗಿರುವ ಮಗುವಿನ
ಮೊಗದಲ್ಲಿ ದಿವ್ಯ ರೂಪಿ
ಬೇಗೆಯ ನಡುವೆ
ತೀಡುವ ತಂಗಾಳಿಯ ಹಾಗೆ
ಹಾಡುವ ಕವಿಯ
ಎದೆಯಲ್ಲಿ ಕಾವ್ಯ ರೂಪಿ
ಸದಾ ಗುಪ್ತಗಾಮಿನಿಯಾಗಿ
ಹರಿಯುತಲಿರುವ
ಬದಲಾವಣೆಯ ತೊರೆಯ
ಸೆಳವಿನಲ್ಲಿ ನವ್ಯ ರೂಪಿ
(ಚಿತ್ರ ಸೆಲೆ: stuartwilde.com)
ಅದ್ಭುತ ವಾಗಿದೆ ಅಣ್ಣಯ್ಯ