ಪಾಲಕ್ ಸೊಪ್ಪಿನ ಪಲಾವ್
– ಕಲ್ಪನಾ ಹೆಗಡೆ.
ಬೇಕಾಗುವ ಸಾಮಾನುಗಳು
- ಬಾಸುಮತಿ ಅಕ್ಕಿ – ಒಂದೂವರೆ ಪಾವು
- ಪಾಲಕ್ ಸೊಪ್ಪು – 1 ಕಟ್ಟು
- ಹೆಚ್ಚಿದ ಹುರುಳಿಕಾಯಿ – 2 ಕಪ್ಪು
- ದಪ್ಪ ಮೆಣಸಿನಕಾಯಿ – 1 ಕಪ್ಪು
- ಹೆಚ್ಚಿದ ಹೂಕೋಸು – 1 ಕಪ್ಪು
- ಟೊಮೇಟೊ – 2
- ಈರುಳ್ಳಿ – 2
- ಗರಮ್ ಮಸಾಲೆ ಪುಡಿ – 1 ಚಮಚ ಪುಡಿ
- ತುಪ್ಪ – 1 ಚಮಚ
- ಎಣ್ಣೆ – 4 ಚಮಚ
- ಶುಂಟಿ ಪೇಸ್ಟ್
- ಹಸಿ ಮೆಣಸಿನಕಾಯಿ – 3
- ಅರಿಶಿಣ ಪುಡಿ – ಅರ್ದ ಚಮಚ
- ಬೆಳ್ಳುಳ್ಳಿ – 4 ಎಸಳು
- ಲವಂಗ – 3
- ಚಕ್ಕೆ -2
- ಮರಾಟಿ ಮೊಗ್ಗು – 2
- ಪಲಾವ್ ಎಲೆ (ದಾಲ್ಚಿನಿ ಎಲೆ)
ಮಾಡುವ ಬಗೆ
ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಮಿಕ್ಸಿ ಜಾರಿಗೆ ಹಾಕಿಕೊಳ್ಳಿ. ಆಮೇಲೆ ಸ್ವಲ್ಪ ಕಾಯಿತುರಿ, ಚಕ್ಕೆ, ಲವಂಗ, ಮರಾಟಿ ಮೊಗ್ಗು,ಬೆಳ್ಳುಳ್ಳಿ, ಶುಂಟಿ ಪೇಶ್ಟ್, 2 ಹಸಿಮೆಣಸಿನಕಾಯಿ ಸ್ವಲ್ಪ ನೀರನ್ನು ಹಾಕಿ ರುಬ್ಬಿಕೊಳ್ಳಿ.
ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಪಲಾವ್ ಎಲೆ (ದಾಲ್ಚಿನಿ ಎಲೆ), ಹೆಚ್ಚಿದ ಟೊಮೇಟೊ, ಈರುಳ್ಳಿ, ಕಾಲು ಚಮಚ ಅರಿಶಿಣ ಪುಡಿ, 1 ಚಮಚ ಗರಮ ಮಸಾಲೆ ಪುಡಿ ಹಾಕಿ ಸ್ವಲ್ಪ ಹುರಿದುಕೊಂಡ ನಂತರ ಅದಕ್ಕೆ ರುಬ್ಬಿದ ಮಿಶ್ರಣವನ್ನು ಹಾಕಿ. ನಂತರ ಇನ್ನೂ ಸ್ವಲ್ಪ ಹುರಿದುಕೊಂಡ ಮೇಲೆ, ಹೆಚ್ಚಿದ ಹುರುಳಿಕಾಯಿ,ದಪ್ಪ ಮೆಣಸಿನಕಾಯಿ, ಹೂಕೋಸಿನ ಜೊತೆಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಹಾಕಿಕೊಳ್ಳಿ. ಒಂದು ಪಾವಿಗೆ ಒಂದೂ ಕಾಲು ಕಪ್ಪು ನೀರನ್ನು ಹಾಕಿ 1 ಚಮಚ ತುಪ್ಪ, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಸೌಟಿನಿಂದ ಚೆನ್ನಾಗಿ ಕಲಸಿಕೊಳ್ಳಿ. ಅನ್ನ ಕುದಿಯುವ ತನಕ ಕುದಿಸಿ, ತಯಾರಿಸಿದ ಪಾಲಕ್ ಸೊಪ್ಪಿನ ಪಲಾವನ್ನು ಸವಿಯಲು ನೀಡಿ.
ಇತ್ತೀಚಿನ ಅನಿಸಿಕೆಗಳು