ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ.

ಕೇಳ್ವಿ, ಪ್ರಶ್ನೆ. ಯಾರು, Who, question

ಎಲ್ಲವನ್ನೂ ಪಡೆದ ನಾನು
ಯಾರಿಗಾಗಿ ಕೊಡಲಿ ಇನ್ನು
ಮುಂದೆ ಏನು ಬೇಡಲೇನು
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಅರಿಯದಂತಹ ಲೋಕದೊಳಗೆ
ಅರಿತು ಬೆಳೆದೆನು ಗಳಿಗೆಯೊಳಗೆ
ಯಾವ ಪಲವಿದೆ ಬದುಕಿನೊಳಗೆ
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಮೋಸ ದ್ವೇಶದ ಉರಿಯು ಇಲ್ಲಿ
ಪ್ರೀತಿ ಪ್ರೇಮದ ಬೆಳಕು ಚೆಲ್ಲಿ
ಮನದ ಆಸೆಗೆ ಎಲ್ಲೆ ಎಲ್ಲಿ ?
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಉದಯವಾಯಿತು ಬೆಳಕಿನಿಂದ
ಹ್ರುದಯ ಮಿಡಿಯಿತು ಬದುಕಿನಿಂದ
ರಾತ್ರಿ ಮೂಡಿತು ಕಡುಗತ್ತಲಿಂದ
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಸೋಲು ಗೆಲುವಿನ ಪಂದ್ಯದಲ್ಲಿ
ಉಸಿರು ಹೆಸರಿನ ಕೆಸರಿನಲ್ಲಿ
ಬುವಿಯ ಒಡಲಿನ ಮೂಸೆಯಲ್ಲಿ
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಅಂತರಾಳದ ಮಾತೇ ಬೇರೆ
ಹೊರ ಬದುಕಿನ ಮಿಡಿತ ಬೇರೆ
ಮರೆತುಬಿಟ್ಟಿತು ಊರಿಗೂರೇ
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

ಜೊತೆಗೆ ಬಂದ ಸಕರು ಯಾರು
ತನುವಿಗಾದ ಜನರು ನೂರು
ಹೊರಡುವಾಗ ಬರುವರಾರು
ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು?

(ಚಿತ್ರ ಸೆಲೆ: freegreatpicture.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: