ದಾಳಿಂಬೆ ಚಿತ್ರಾನ್ನ

– ಸವಿತಾ.

ಬೇಕಾಗುವ ಸಾಮಾನುಗಳು

  • ದಾಳಿಂಬೆ ಬೀಜ – 1 ಹಣ್ಣಿನದು
  • ಕರಿಬೇವು – 2 ಕಡ್ಡಿ ಅತವಾ 20 ಎಲೆ
  • ಕೊತ್ತಂಬರಿ ಸೊಪ್ಪು – 2 ಚಮಚ [ಕತ್ತರಿಸಿದ್ದು]
  • ಹಸಿ ಮೆಣಸಿನಕಾಯಿ – 2
  • ಒಣ ಕೆಂಪು ಕಾರದ ಪುಡಿ – 1 ಚಮಚ
  • ಹಸಿ ಕೊಬ್ಬರಿ ತುರಿ – 1/2 ಬಟ್ಟಲು
  • ಚಕ್ಕೆ – ಕಾಲು ಇಂಚು
  • ಲವಂಗ – 4
  • ಏಲಕ್ಕಿ – 2
  • ಗೋಡಂಬಿ – 10
  • ಒಣ ದ್ರಾಕ್ಶಿ – 20
  • ಅರಿಶಿಣ ಪುಡಿ – 1/2 ಚಮಚ
  • ತುಪ್ಪ – 5 ಚಮಚ
  • ಸಾಸಿವೆ – 1/4 ಚಮಚ
  • ಜೀರಿಗೆ – 1/2 ಚಮಚ
  • ಇಂಗು – 1/4 ಚಮಚ
  • ಕಡಲೇ ಬೀಜ – 1 – 2 ಚಮಚ
  • ಕಡಲೇ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಅಕ್ಕಿ – 1 ಲೋಟ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಅಕ್ಕಿ ತೊಳೆದು ನೀರು ಹಾಕಿ ಅನ್ನ ಮಾಡಿ ಇಟ್ಟುಕೊಳ್ಳಿ. ಹಸಿ ಮೆಣಸಿನಕಾಯಿ, ಜೀರಿಗೆ, ಕಾಲು ಬಟ್ಟಲು ಕೊಬ್ಬರಿ ತುರಿ ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ. ಅರ‍್ದ ಕೊಬ್ಬರಿ ತುರಿ (ಕಾಲು ಬಟ್ಟಲು) ಮೇಲೆ ಉದುರಿಸಲು ತೆಗೆದಿಟ್ಟುಕೊಳ್ಳಿ. ದಾಳಿಂಬೆ ಬೀಜ ಬಿಡಿಸಿ ಇಟ್ಟುಕೊಳ್ಳಿ.

ತುಪ್ಪ ಬಾಣಲೆಗೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ, ಜೀರಿಗೆ, ಕರಿಬೇವು, ಇಂಗು ಹಾಕಿ ಹುರಿಯಿರಿ. ಕಡಲೇ ಬೀಜ ಹಾಕಿ ನಂತರ ಗೋಡಂಬಿ, ಒಣ ದ್ರಾಕ್ಶಿ ಮತ್ತು ರುಬ್ಬಿದ ಹಸಿ ಕೊಬ್ಬರಿ ಸೇರಿಸಿ. ಕಡಲೇ ಬೇಳೆ, ಉದ್ದಿನ ಬೇಳೆ ಹಾಕಿ, ಉಪ್ಪು. ಅರಿಶಿಣ ಪುಡಿ ಹಾಕಿ ಚೆನ್ನಾಗಿ ಹುರಿಯಿರಿ. ಚಕ್ಕೆ ಲವಂಗ ಏಲಕ್ಕಿ ಪುಡಿ ಮಾಡಿ ಹಾಕಿ. ಒಣ ಕಾರದ ಪುಡಿ ಹಾಕಿ ಒಲೆ ಆರಿಸಿ. ಹಸಿ ಕೊಬ್ಬರಿ ತುರಿ, ದಾಳಿಂಬೆ ಬೀಜ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ, ಮಾಡಿಟ್ಟ ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಿರಿ. ಈಗ ದಾಳಿಂಬೆ ಚಿತ್ರಾನ್ನ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: