‘ಅಬಯ ನೀಡಲಿ ಗಣಪ’

ವೆಂಕಟೇಶ ಚಾಗಿ.

ganesha

** ದೂರು **

ಎಲ್ಲವನ್ನೂ ನೋಡುತ್ತಾ
ನಗುತ್ತಾ ಕುಳಿತಿದ್ದಾನೆ
ಸುಮ್ಮನೆ ಬೆನಕ
ಅವನಿಗೆಂದೇ ಮೀಸಲಿಟ್ಟ
ಮೋದಕ ತಿಂದವರೆಶ್ಟೋ
ದೂರು ಕೊಟ್ಟಿಲ್ಲ
ಇಲ್ಲಿಯತನಕ!

** ಜಾಗ್ರುತಿ **

ಮೋದಕ ಪ್ರಿಯ ಗಣಪ
ಮನೆಮನೆಗೂ ಬಂದ
ಕರೋನಾ ಕಾಲದಲ್ಲಿ
ಸಾಮಾಜಿಕ ಅಂತರ
ಮಾಸ್ಕ್ ದರಿಸಿ ಎಂದ
ಬಂದಲ್ಲಿ ಹೋದಲ್ಲಿ!

** ಕ್ಶಮೆ **

ಮಕ್ಕಳಾದಿಯಾಗಿ
ಎಲ್ಲರಿಗೂ ಇಶ್ಟವಾಗುವನು
ಪ್ರತಮ ಪೂಜಿತ ಗಣಪ
ಒಂದು ಸಾರಿ ನಮಿಸಿಬಿಡಿ
ಮನ್ನಿಸಿಬಿಡಲಿ ಇಂದೇ
ನಾವು ಮಾಡಿದ ಪಾಪ!

** ಮಣ್ಣು **

ಮಣ್ಣು ದೇವರು
ಮಣ್ಣಿನಿಂದಲೇ ದೇವರು
ಮಣ್ಣಿನಿಂದಲೇ ಸ್ರುಶ್ಟಿಯಾದ
ನಮ್ಮ ಪ್ರಿಯ ಗಣಪ
ಮಣ್ಣು ಮಲಿನವಾಗದಿರಲಿ
ದೇವರು ಶಾಂತವಾಗಲಿ
ಅಬಯ ನೀಡಲಿ ಗಣಪ
ಮರೆತು ಎಲ್ಲ ಕೋಪ ತಾಪ!

( ಚಿತ್ರಸೆಲೆ : pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: