ಹನಿಗವನಗಳು

– ವೆಂಕಟೇಶ ಚಾಗಿ.

*** ನಂಬಿಕೆ ***

ಹುಚ್ಚಿ ನೀನು ನನ್ನ
ಅಶ್ಟೋಂದು ಯಾಕ
ಹಚ್ಚಿಕೊಂಡಿ…?
ಬಿಟ್ಟುಬಿಡು ಬಯ
ಎಂದಿಗೂ ಮುರಿಯಲ್ಲ
ನನ್ನ ನಿನ್ನ ಬಾಳ ಕೊಂಡಿ

*** ಕಣ್ಣು ***

ಜಗದ ಹುಳುಕುಗಳನ್ನು
ಕಾಣುವಂತೆ ಮಾಡುವುದು
ಹೊರಗಣ್ಣು
ಒಳಗಿನ ಹುಳುಕುಗಳನ್ನು
ಕಾಣಬಹುದು
ತೆರೆದಾಗ ಒಳಗಣ್ಣು

*** ಬದ್ದತೆ ***

ನಿನ್ನ ಎಲ್ಲ
ಆಸೆ ಬಯಕೆಗಳ ಮಂಡನೆ
ತುಂಬಾ ಕ್ರಮಬದ್ದ
ಚಿಂತೆ ಬಿಡು ಚಿನ್ನ
ನಿನ್ನೆಲ್ಲಾ ಬಯಕೆಯನ್ನು
ಈಡೇರಿಸಲು ನಾನು
ಎಂದೆಂದಿಗೂ ಬದ್ದ

*** ನಲಿವು ***

ನನ್ನಾಕೆಗೆ
ಪ್ರತಿದಿನ ಹೇಳುವೆ
ನಲಿಯುತಾ ಇರು ನೀ
ನಗುತಾ ನಗುತಾ…
ಆದರೆ
ಅವಳು ಅನ್ನುವಳು
ಕಂಡಿತಾ ನಲಿಯುವೆ
ಮೊದಲು ‘ನಗ’ ತಾ ‘ನಗ’ ತಾ!

(ಚಿತ್ರ ಸೆಲೆ: ecosalon.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Raghuramu N.V. says:

    ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

%d bloggers like this: