ಕವಿತೆ: ಹಂಬಲಗಳ ಗೊಂದಲ

– ರಾಜೇಶ್.ಹೆಚ್.

 

ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ
ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ

ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ
ಮದುವೆಯಾದರೆ ಸಂತಾನ ಬೇಕೆಂಬ ಹಂಬಲ
ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ
ಅದಿಕವಾದರೆ ಸಾಕುವುದು ಹೇಗೆಂದು ಗೊಂದಲ

ಗ್ರುಹಿಣಿಗೆ ದುಡಿಮೆ ಬೇಕೆಂಬ ಹಂಬಲ
ದುಡಿವವಳ್ಗೆ ವಿಶ್ರಾಂತಿ ಬೇಕೆಂಬ ಹಂಬಲ

ಹಸಿದವನಿಗೆ ಒಪ್ಪೊತ್ತಿನ ಊಟದ ಬಗೆಗೆ ಹಂಬಲ
ಅಲೆಮಾರಿಗೆ ಹಸಿವುಂಗಳ ವಿಲೇವಾರಿಯ ಗೊಂದಲ
ಒಪ್ಪೊತ್ತಿದವಂಗೆ ಮ್ರುಶ್ಟಾನ್ನ ಬೋಜನದ ಹಂಬಲ
ಮ್ರುಶ್ಟಾನ್ನ ಇರುವವಂಗೆ ರೋಗ-ರುಜಿನಗಳ ಗೊಂದಲ

ರೋಗಿಗೆ ಅಶ್ಟಾಯಿರಾರೋಗ್ಯದ ಹಂಬಲ
ಆರೋಗ್ಯವಂತನಿಗೆ ಚಿರಾಯುವಾಗುವ ಹಂಬಲ
ಕೊಬ್ಬಿದವಂಗೆ ಬೊಜ್ಜಿಳಿಸುವ ಹಂಬಲ
ಕ್ರುಶನಿಂಗೆ ಕೊಬ್ಬೇರದ ಗೊಂದಲ

ಈ ಹಂಬಲ ಗೊಂದಲಗಳಲಿ ಕಳೆಯುತ್ತದೆ ಜೀವನ
ಹುಬ್ಬೇರಿಸುವದರೊಳು ಬಂದೆರಗುವುವದು ಮರಣ

(ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: