ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.

 

ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ
ಕನ್ನಡಿಗರೊಲುಮೆಯ ಬಾಶೆಯು ಕನ್ನಡ
ಕನ್ನಡಿಗರ ತನು ಮನವು ಕನ್ನಡ
ಕನ್ನಡಿಗರ ಬಾವವು ಕನ್ನಡ

ಕಣಕಣದಲ್ಲೂ ಬೆರೆತ ಕನ್ನಡ
ನದಿಸಾಗರದಲೆಗಳ ಮೊರೆತ ಕನ್ನಡ
ಉಸಿರು ಉಸಿರಲ್ಲೂ ಸ್ಮರಣೆಯೇ ಕನ್ನಡ
ಹಸಿರಿನ ಸಿರಿಯಲ್ಲಿ ಕಂಗೊಳಿಸುವ ಕನ್ನಡ

ಹಕ್ಕಿಗಳ ಕಲರವದಲ್ಲಿ ಇಂಪಾದ ಕನ್ನಡ
ಮ್ರುಗಗಳ ಜೇಂಕಾರದಲ್ಲೂ ಅಬ್ಬರಿಸಿದ ಕನ್ನಡ
ಮಗುವಿನ ತೊದಲು ನುಡಿಯಲ್ಲಿ ಮುದ್ದಾದ ಕನ್ನಡ
ಕನ್ನಡಿಗರಲ್ಲಿ ಸ್ನೇಹ ಬಾಂದವ್ಯ ಬೆಸೆದ ಕನ್ನಡ

ಕವಿ ಪುಂಗವರ ಸಾಲುಗಳಲ್ಲಿ ಕುಣಿದಾಡಿದ ಕನ್ನಡ
ಸ್ವರ ಗಾರುಡಿಗರ ದ್ವನಿಯಲ್ಲಿ ನಲಿದಾಡಿದ ಕನ್ನಡ
ಚಂದ ಚಂದದ ಅಕ್ಶರಗಳ ಪದ ಪುಂಜವೇ ಕನ್ನಡ
ಕನ್ನಡಾಂಬೆಯ ಮನದಾಳದ ಇಂಗಿತವೊಂದೇ
ಎಂದೆಂದಿಗೂ ಉಳಿಯಲಿ ಬೆಳೆಯಲಿ ಕನ್ನಡ ಕನ್ನಡ

(ಚಿತ್ರ ಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: