ಕವಿತೆ: ಸಿರಿವಂತಿ ಕನ್ನಡ ತಾಯಿ
ಪಂಪ, ಗದುಗ ಬಾರತ
ಕುಪ್ಪಳ್ಳಿ ರಾಮಕತೆ
ರಗಳೆ ವಚನ
ದಾಸಪದಗಳು
ಕೋಟಿ ಕಾದಂಬರಿ
ಗೀಗಿ ಸೋಬಾನೆ
ಸೋಗು
ಅಲಾವಿ ಲಾವಣಿ
ತ್ರಿಪದಿ, ಬಾಮಿನಿ
ಶಟ್ಪದಿಗಳು
ಸುಳಾದಿ, ಆರತಿ
ತತ್ವ, ಜಾನಪದ
ಹಳ, ನಡು, ಹೊಸ
ಚಂಪೂ ಬಂಡಾಯ
ನವ್ಯ, ನವ್ಯೋತ್ತರ
ಪುರವಂತ ಗಾಸೆ
ಕೊರವಂಜಿ ಕಣಿ
ಕುಣಿವ ಯಕ್ಶಗಾನ
ಜಗ್ಗಲಿ, ಡೊಳ್ಳು ಪದ
ಜಗರಂಗ ಸಾಲದ
ದೊಡ್ಡಾಟ ನಾಟಕ
ದೈವದೊಡನೆ
ಸವಾಲಿಗೂ ಬಜನೆ
ಹರಿಕತೆ ಕೀರ‍್ತನ
ಚೌಡಿಕೆ, ಪುರಾಣ
ನಕ್ಕು ನಗಿಸಲು
ಹಾಸ್ಯವು
ಚುಟುಕು ಒಗಟು
ಹಾಯ್ಕು ನೀಳ್ಗತೆಗಳು
ನಿಲುಕಿದ್ದು ಇಶ್ಟು
ದಕ್ಕಿದ್ದು ಕೊಂಚ
ಹಾಯದ ಹರವು
ಇನ್ನೆಶ್ಟೊ
ಇಂತ ಸಿರಿವಂತಿ
ಕನ್ನಡ ತಾಯಿ
ಇಡುಗಂಟಾಗದೆ
ತೊಡುವಂಗಿಯಾಗಲಿ
ಬಾಶೆ ಬ್ರಹ್ಮನಿಗೆ ಬರವೆ?
ಬಳಸಿ ಉಳಿಸದಿದ್ದರೆ
ದೈವವಿದ್ದೂ
ದರಿದ್ರವೇ
(ಚಿತ್ರ ಸೆಲೆ: feelsomu.blogspot.com)
ಇತ್ತೀಚಿನ ಅನಿಸಿಕೆಗಳು