ಕವಿತೆ : ಹೊಸ ವರುಶ

– .

 

ಬರುತಿದೆ ನವ ವರುಶ
ತರುತಿದೆ ಬಾವ ಹರುಶ
ಕೋರುತಿದೆ ಸಹಬಾಳ್ವೆಗೆ ಸೂತ್ರ
ಸಾರುತಿದೆ ವಿಶ್ವಶಾಂತಿಯ ಮಂತ್ರ

ಜನವರಿಯು ಸಂಕ್ರಾಂತಿ ಸಡಗರವು
ಪೆಬ್ರವರಿಯು ಶಿವರಾತ್ರಿಯ ಸಂಬ್ರಮವು
ಮಾರ‍್ಚಿನಲ್ಲಿ ಯುಗಾದಿ ಚೈತ್ರ ಸಿಂಚನವು
ಏಪ್ರಿಲಲ್ಲಿ ಬಾಳ ತಿರುವಿನ ಪರೀಕ್ಶೆಗಳ ಕದನವು

ಮೇನಲ್ಲಿ ವಿದ್ಯಾರ‍್ತಿಗಳ ಬವಿಶ್ಯದ ಪಲಿತಾಂಶವು
ಜೂನಿನ ಶಾಲೆಗಳ ಆರಂಬ ತಳಿರು ತೋರಣವು
ಜುಲೈನಲ್ಲಿ ಕಾರ‍್ಗಿಲ್ ಕಲಿಗಳ ವಿಜಯೋತ್ಸವವು
ಆಗಸ್ಟ್ ನಲ್ಲಿ ಬಾರತಾಂಬೆಯ ಸ್ವಾತಂತ್ರ‍್ಯೋತ್ಸವವು

ಸೆಪ್ಟೆಂಬರ‍ಲ್ಲಿ ಗುರುಗಳ ಸ್ಮರಿಸುವ ಬಾಗ್ಯವು
ಅಕ್ಟೋಬರ‍ಲ್ಲಿ ಗಾಂದೀಜಿಯ ನೆನೆವ ಯೋಗವು
ನವೆಂಬರ‍ಲ್ಲಿ ಮಕ್ಕಳ ಪ್ರೀತಿಯ ಚಾಚಾರ ನೆನಪು
ಡಿಸೆಂಬರ‍ಲ್ಲಿ ಕ್ರಿಸ್ಮಸ್ ಸಡಗರದ ಹೊಳಪು

ಹನ್ನೆರಡು ತಿಂಗಳುಗಳ ಮಜದ ಬೆರಗುಗಳು
ಐವತ್ತೆರಡು ವಾರಗಳ ರಜದ ಸೊಬಗುಗಳು
ಮೂನ್ನರೈವತ್ತೈದು ದಿನಗಳ ನಿತ್ಯ ಆಟಪಾಟವು
ಎಂಟ್ಸಾವಿರ ಏಳ್ನೂರರವತ್ತು ಗಂಟೆಗಳ ಅನುಬವವು

ವರುಶಕ್ಕೆ ಗೋಡೆ ಕ್ಯಾಲೆಂಡರ್ ಬದಲಾವಣೆ
ಹರುಶಕ್ಕೆ ಅಡೆತಡೆಗಳ ನಿತ್ಯ ಹಲವು ಬವಣೆ
ಪ್ರತಿಕ್ಶಣವನು ಆನಂದಿಸುವ ಮನೋಬಾವನೆಯು
ಪರಮಾತ್ಮನ ಈ ನಾಟಕದಿ ನಮ್ಮದಿಲ್ಲಿ ನಟನೆಯು.

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: