ಮಸಾಲಾ ರೊಟ್ಟಿ

– ಬವಾನಿ ದೇಸಾಯಿ.

ನೀವು ಮಸಾಲಾ ಹಪ್ಪಳ ತಿಂದಿರಬಹುದು, ಮಸಾಲಾ ರೊಟ್ಟಿ ತಿಂದಿರೇನು…? ಇಲ್ಲಂದ್ರ ಈಗ ಮಾಡ್ಕೊಂಡು ತಿನ್ನುಣು ಬರ‍್ರಿ…

ಏನೇನು ಬೇಕು

  • ಕಟಗ[ಒಣಗಿದ] ರೊಟ್ಟಿ
  • ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ
  • ಸಣ್ಣಗ ಹೆಚ್ಚಿದ ಟೊಮೆಟೋ
  • ರಂಜಕ, ಇಲ್ಲಾಂದ್ರ ಒಣ ಕಾರ ಪುಡಿನೂ ಬಳಸಬಹುದು
  • ಸ್ವಲ್ಪ ಎಣ್ಣಿ,
  • ಸ್ವಲ್ಪ ಉಪ್ಪು
  • ಕೊತ್ತಂಬರಿ
  • ಗಜ್ಜರಿ
  • ಮೂಲಂಗಿ

ಹೆಂಗ ಮಾಡುದು ಅಂದ್ರ..

ಈಡಾಗಿ[ಉದ್ದಕ್ಕೆ] ಗಜ್ಜರಿ ಹೆರದು ಇಟ್ಕೊರಿ. ಹಂಗ ನಿಮಗ ಬೇಕಾದಶ್ಟು ಮೂಲಂಗಿ ಹೆರದು ಇಟ್ಕೊರಿ.

ಮೊದಲು ರಂಜಕ, ಎಣ್ಣಿ ಮತ್ತ ಉಪ್ಪು ಕಲಿಸಿ ರೊಟ್ಟಿಗೆ ಸವರಬೇಕು. ಆಮೇಲೆ, ಹೆರದ ಗಜ್ಜರಿ ಮತ್ತು ಮೂಲಂಗಿ, ಸಣ್ಣಗ ಹೆಚ್ಚಿದ ಉಳ್ಳಾಗಡ್ಡಿ, ಟೊಮ್ಯಾಟೋ ಉದರಸರಿ ರೊಟ್ಟಿ ಮ್ಯಾಲೆ.

ಕೊನೆಗೆ ಕೊತ್ತಂಬರಿ ಉದರಿಸಿ, ಜಡಿರಿ.

** ನಿಮಗ ಏನ್ ಏನ್ ಹಸಿ ಕಾಯಿಪಲ್ಯ ಸೇರತದ (ಹಸಿ ಮೆಂತೆ ಪಲ್ಯ, ಹಕ್ಕರಕಿ, ಎಳೆ ಸೌತೆಕಾಯಿ…) ಅದನೆಲ್ಲಾ ಹಾಕಿ ನಿಮಗ ಹೆಂಗ ಬೇಕೋ ಹಂಗ ಮಾಡ್ಕೊಂಡು ತಿನ್ರಿ ?

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. savita kulkarni says:

    ತುಂಬಾ ಚೆನ್ನಾಗಿದೆ

ಅನಿಸಿಕೆ ಬರೆಯಿರಿ: