ಬಾಳೆ ಹಣ್ಣಿನ ಮಲೈ
– ಸವಿತಾ.
ಬೇಕಾಗುವ ಸಾಮಾನುಗಳು
- ಬಾಳೆಹಣ್ಣು – 2
- ಎಳ್ಳು ( ಕರಿಎಳ್ಳು ಮತ್ತು ಬಿಳಿಎಳ್ಳು ) – 2 ಚಮಚ
- ಹುರಿ ಗಡಲೆ ಅತವಾ ಪುಟಾಣಿ – 2 ಚಮಚ
- ಹಸಿ ಕೊಬ್ಬರಿ ತುರಿ – 1 ಬಟ್ಟಲು
- ಕೆನೆ – 1 ಬಟ್ಟಲು
- ಹಾಲು – 1 ಬಟ್ಟಲು
- ಬೆಲ್ಲದ ಪುಡಿ ಅತವಾ ಸಕ್ಕರೆ – ಒಂದೂ ವರೆ ಬಟ್ಟಲು)
- ತುಪ್ಪ- 2 ಚಮಚ
- ಏಲಕ್ಕಿ – 2
ಮಾಡುವ ಬಗೆ
ಮೊದಲಿಗೆ ಎಳ್ಳು ಮತ್ತು ಹುರಿಗಡಲೆಯನ್ನು ಮಿಕ್ಸರ‍್‍ನಲ್ಲಿ ಪುಡಿಮಾಡಿಟ್ಟುಕೊಳ್ಳಿರಿ. ಆಮೇಲೆ ಹಸಿ ಕೊಬ್ಬರಿ ತುರಿ, ತುರಿದಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪ ಹಾಕಿ ಎಳ್ಳಿನ ಪುಡಿ, ಹುರಿಗಡಲೆ ಪುಡಿ ಹಾಕಿ ಸ್ವಲ್ಪ ಹುರಿದು ನಂತರ ಹಸಿ ಕೊಬ್ಬರಿ ತುರಿ ಹಾಕಿ ಹುರಿಯಿರಿ. ಅಮೇಲೆ ಬಾಳೆಹಣ್ಣನ್ನು ಕತ್ತರಿಸಿ ಹಾಕಿ ಹುರಿಯಿರಿ. ತದನಂತರ ಹಾಲಿನ ಕೆನೆ ಮತ್ತು ಹಾಲು ಹಾಕಿ ಕುದಿಸಿರಿ. ಮದ್ಯಮ ಉರಿಯಲ್ಲಿ ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು. ಈಗ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ ಗಟ್ಟಿಯಾದ ಮೇಲೆ ಒಲೆ ಆರಿಸಿ ಇಳಿಸಿ. ನಂತರ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ತಿರುಗಿಸಿ, ಒಂದು ತಟ್ಟೆಗೆ ತುಪ್ಪ ಸವರಿ ಅದರ ಮೇಲೆ ಈ ಮಿಶ್ರಣ ಸುರಿದು ಬೇಕಾದ ಆಕಾರಕ್ಕೆ ಕತ್ತರಿಸಿಟ್ಟುಕೊಳ್ಳಿರಿ. ಈಗ ಬಾಳೆಹಣ್ಣಿನ ಮಲೈ ಸಿಹಿ ಸವಿಯಲು ಸಿದ್ದವಾಗಿದೆ.
ಇತ್ತೀಚಿನ ಅನಿಸಿಕೆಗಳು