ಕವಿತೆ: ಪ್ರೇಮಗಾನ ಸುದೆಯ ಹೊನಲು

– ವಿನು ರವಿ.

ಒಲವು, ಪ್ರೀತಿ, Love

ರಾದೆ ನಿನ್ನ ಮನದ ತುಂಬಾ
ಅವನ ನೆನಪೆ ತುಂಬಿ ಬರಲು
ಮಳೆಯ ಮೋಡ ಕಣ್ಣ ತುಂಬಿ
ಗರಿಯ ಬಿಚ್ಚಿ ಕುಣಿದಂತೆ ನವಿಲು
ಅರಳಿತೇನು ಮೋಹದೊಲವು

ಬಾವ ಜೇನು ಸೋಕಿ ಕೊಳಲು
ಪ್ರೇಮಗಾನ ಸುದೆಯ ಹೊನಲು
ಕಣ್ಣ ಮುಂದೆ ಅವನ ನೆರಳು
ಕಾಡಿತೇನೆ ಅವನ ನಿಲವು

ಎದೆಯ ಮಾತು ಮೀಟಿ ಬರಲು
ಮೌನ ರಾಗ ಮಿಡಿಯುತಿರಲು
ಯಾವ ಬಾವ ಚಿತ್ರ ಸೆಳೆದು
ಕರೆಯಿತೇನು ನಿನ್ನನು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: