ಶಾವಿಗೆ ರವೆ ಇಡ್ಲಿ

– ಸವಿತಾ.

ಬೇಕಾಗುವ ಸಾಮಾನುಗಳು

 • ಶಾವಿಗೆ – 1 ಬಟ್ಟಲು
 • ಗೋದಿ ರವೆ – 1 ಬಟ್ಟಲು
 • ಎಣ್ಣೆ – 2 ಚಮಚ
 • ಹಸಿ ಬಟಾಣಿ – ಅರ‍್ದ ಬಟ್ಟಲು
 • ಗಜ್ಜರಿ ತುರಿ – ಅರ‍್ದ ಬಟ್ಟಲು
 • ಕಡಲೇ ಬೀಜ – 2 ಚಮಚ
 • ಗೋಡಂಬಿ ಸ್ವಲ್ಪ
 • ಒಣ ದ್ರಾಕ್ಶಿ ಸ್ವಲ್ಪ
 • ಹಸಿ ಮೆಣಸಿನಕಾಯಿ – 2
 • ಕರಿಬೇವು ಸ್ವಲ್ಪ
 • ಕೊತ್ತಂಬರಿ ಸೊಪ್ಪು ಸ್ವಲ್ಪ
 • ಉಪ್ಪು ರುಚಿಗೆ ತಕ್ಕಶ್ಟು
 • ಅಡುಗೆ ಸೋಡಾ – ಒಂದು ಚಿಟಿಕೆ
 • ಸಾಸಿವೆ – ಅರ‍್ದ ಚಮಚ
 • ಜೀರಿಗೆ – ಅರ‍್ದ ಚಮಚ
 • ಮೊಸರು – 2 ಬಟ್ಟಲು
 • ನೀರು – ಅರ‍್ದ ಬಟ್ಟಲು
 • ಸ್ವಲ್ಪ ಹಸಿ ಶುಂಟಿ

ಮಾಡುವ ಬಗೆ

ಮೊದಲಿಗೆ ಬಾಣಲೆಗೆ ಅರ‍್ದ ಚಮಚ ಎಣ್ಣೆ ಹಾಕಿ ಶಾವಿಗೆ ಹುರಿದು ತೆಗೆಯಿರಿ. ಅರ‍್ದ ಚಮಚ ಎಣ್ಣೆ ಹಾಕಿ ರವೆ ಹುರಿದು ತೆಗೆಯಿರಿ. ಈಗ ಎಣ್ಣೆ ಹಾಕಿ ಒಗ್ಗರಣೆ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಸಿಮೆಣಸಿನಕಾಯಿ ಕತ್ತರಿಸಿ ಹಾಕಿರಿ. ನಂತರ ಸ್ವಲ್ಪ ಕತ್ತರಿಸಿದ ಹಸಿ ಶುಂಟಿ, ಕಡಲೆ ಬೀಜ, ಗೋಡಂಬಿ, ಒಣ ದ್ರಾಕ್ಶಿ, ಹಸಿ ಬಟಾಣಿ, ಗಜ್ಜರಿ ತುರಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ರವೆ, ಶಾವಿಗೆ ಸೇರಿಸಿ ಇನ್ನೊಮ್ಮೆ ಹುರಿದು ಒಲೆ ಆರಿಸಿ. ಉಪ್ಪು ರುಚಿಗೆ ತಕ್ಕಶ್ಟು ಹಾಕಿ, ಆಮೇಲೆ ಇದು ಸ್ವಲ್ಪ ತಣ್ಣಗಾದ ಮೇಲೆ ಮೊಸರು ನೀರು ಸೇರಿಸಿ ಹಾಕಿರಿ. ಆಮೇಲೆ ಅಡುಗೆ ಸೋಡಾ ಸೇರಿಸಿ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳಿರಿ. ಈಗ ಇಡ್ಲಿ ಬಟ್ಟಲಿಗೆ ಎಣ್ಣೆ ಹಚ್ಚಿ, ತುಂಬಿ ಹಾಗೇ ಬೇಯಿಸಿ ತೆಗೆಯಿರಿ. ಚಟ್ನಿ ಸಾಂಬಾರಿನ ಜೊತೆ ಸವಿಯಿರಿ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: