ಕವಿತೆ: ದೀಪ ಬೆಳಗಲಿ

– ವಿನು ರವಿ.

ಅಂಬೇಡ್ಕರ್

ದೀಪ ಬೆಳಗಲಿ
ದೀಪ ಬೆಳಗಲಿ
ಬೀಮ ದೀಪವು ಬೆಳಗಲಿ
ಸಮಾನತೆಯ ಜಗಕೆ ಸಾರಿದ
ಬೀಮ ದೀಪ ಬೆಳಗಲಿ

ನೊಂದ ಜನರ ಕಣ್ಣು ಒರೆಸಿದಾ
ಶ್ರಮಿಕರಾ ಬದುಕಿಗೆ ಶಕ್ತಿ ತುಂಬಿದಾ
ಸಾಮಾನ್ಯನೂ ಸಾಹೇಬನೆ
ಎಂದು ಜಗಕೆ ಸಾರಿದಾ
ದೀಪ ಬೆಳಗಲಿ ದೀಪ ಬೆಳಗಲಿ
ಬೀಮ ದೀಪವೂ ಬೆಳಗಲಿ

ಅನ್ನಮಯವೀ ದೀಪ
ಬುದ್ದ ಮಯವೀ ದೀಪ
ಮಂಗಳಕರವೀ ದೀಪ
ಬಾರತ ರತ್ನವೀ ದೀಪ

(ಚಿತ್ರಸೆಲೆ : wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications