ಮಾಡಿ ನೋಡಿ ಮೈಸೂರು ಪಾಕು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಕಡಲೇ ಹಿಟ್ಟು – 1 ಲೋಟ
  • ಸಕ್ಕರೆ –  1.5 ಲೋಟ
  • ತುಪ್ಪ –  1 ಲೋಟ

ಮಾಡುವ ಬಗೆ

ಮೊದಲಿಗೆ ಬಾಣಲೆಗೆ ಚೂರು ತುಪ್ಪ ಹಾಕಿಕೊಂಡು, ಕಡಲೇ ಹಿಟ್ಟನ್ನು ನಡು ಉರಿಯಲ್ಲಿ ಹುರಿದುಕೊಳ್ಳಿರಿ(ಕಂದು ಬಣ್ಣ ಬರುವ ವರೆಗೆ). ಹುರಿದ ಹಿಟ್ಟಲ್ಲಿ ಗಂಟುಗಳಾಗಿದ್ದರೆ, ಅದನ್ನು ಒಡೆದು ನುಣ್ಣಗೆ ಮಾಡಿಕೊಳ್ಳಿರಿ. ಈಗ ಇನ್ನೊಂದು ಪಾತ್ರೆಯಲ್ಲಿ ಸಕ್ಕರೆ ಮತ್ತು ನೀರು ಹಾಕಿ, ಸಕ್ಕರೆ ಪಾಕ ಮಾಡಿಕೊಳ್ಳಿರಿ. ಒಂದು ಎಳೆ ಪಾಕ ಬಂದರೆ ಸಾಕು. ಈಗ ಹುರಿದಿಟ್ಟುಕೊಂಡ ಕಡಲೇ ಹಿಟ್ಟನ್ನು ಮೆಲ್ಲನೆ ಪಾಕಕ್ಕೆ ಹಾಕುತ್ತಾ, ಗೂರಾಡಬೇಕು/ಅಲ್ಲಾಡಿಸಬೇಕು. ಇದು ಕುದಿಯುತ್ತಾ ಪಾಕದ ಹಿಟ್ಟಿನಲ್ಲಿ ಗುಳ್ಳೆಗಳು ಬರಲು ಮೊದಲಾದಾಗ, ತುಪ್ಪವನ್ನು ಹಾಕುತ್ತಾ ಗೂರಾಡಬೇಕು. ಹೀಗೆ ಪಾಕದ ಹಿಟ್ಟು, ಪಾತ್ರೆಯ ತಳಹಿಡಿಯದಂತೆ, ಒಂದು ಮುದ್ದೆಯ ರೀತಿ ಹದಕ್ಕೆ ಬಂದಾಗ, ಒಲೆ ಅರಿಸಿ. ಈಗ ಒಂದು ತಟ್ಟೆಗೆ ತುಪ್ಪವನ್ನು ಸವರಿ, ಅದಕ್ಕೆ ಪಾಕದ ಹಿಟ್ಟನ್ನು ಹಾಕಿರಿ. ಈಗ ಚಮಚ ಇಲ್ಲವೇ ಚಾಕು ಬಳಸಿ, ಪೀಸು ಕುಯ್ದು ಕೊಳ್ಳಿರಿ ಮತ್ತು ಇದನ್ನು ಆರಲು ಬಿಡಿ. ಈಗ ಬಾಯಲ್ಲಿ ನೀರೂರಿಸುವ ಮೈಸೂರು ಪಾಕು ತಯಾರಾಗಿದೆ.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: