ಕವಿತೆ: ನಾ ಹೇಗೆ ಬರೆಯಲಿ ಕವಿತೆಯಾ

– ವಿನು ರವಿ.

nature

ಸದ್ದಿರದೆ ಸುಳಿದಾಡುತ
ತಣ್ಣಗೆ ಕಾಡುವ
ತಂಗಾಳಿಯೇ

ಮೋಡಗಳ ಮರೆಯಲಿ
ಕಣ್ಣಾ ಮುಚ್ಚಾಲೆಯಾಡುವ
ಹೊಂಬಿಸಲೇ

ಕಂಪಿಂದಲೇ ಸೆಳೆಯುತ್ತಾ
ಬಿರಿವ ಹೂಗಳೇ

ಬಯಲೊಳಗೆ ಮರೆಯಾಗಿ
ಅವಿತು ಮದುರವಾಗಿ
ಹಾಡುವ ಹಕ್ಕಿಗಳೇ

ಶಬ್ದಗಳಲಿ ತಡಕಾಡಿದ
ಬಾವಚಿತ್ರಗಳ
ನೀವೆ ಕದ್ದಿರಲ್ಲ
ನಾ ಹೇಗೆ ಬರೆಯಲಿ
ಕವಿತೆಯಾ

(ಚಿತ್ರ ಸೆಲೆ: stuartwilde.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: