ಟೊಮೆಟೊ ಬೇಳೆ ಬಾತ್
– ಸವಿತಾ.
ಬೇಕಾಗುವ ಸಾಮಾನುಗಳು
ಅಕ್ಕಿ – 1 ಲೋಟ
ತೊಗರಿ ಬೇಳೆ – 1/2 ಲೋಟ
ಟೊಮೆಟೊ – 2
ಹಸಿ ಶುಂಟಿ – 1/4 ಇಂಚು
ಜೀರಿಗೆ – 1/2 ಚಮಚ
ಸಾಸಿವೆ – 1/2 ಚಮಚ
ಇಂಗು – 1/4 ಚಮಚ
ಕರಿಬೇವು ಎಲೆ – 15
ಉದ್ದಿನ ಬೇಳೆ – 1/2 ಚಮಚ
ಗೋಡಂಬಿ – 10
ಹಸಿ ಮೆಣಸಿನಕಾಯಿ – 2
ಉಪ್ಪು – ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ ಸ್ವಲ್ಪ
ಒಣ ಕಾರದ ಪುಡಿ – 1/2 ಚಮಚ
ತುಪ್ಪ – 6 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಮಾಡುವ ಬಗೆ
ಅಕ್ಕಿ, ತೊಗರಿ ಬೇಳೆ ತೊಳೆದು ಕುಕ್ಕರ್ ನಲ್ಲಿ ನಾಲ್ಕು ಕೂಗು ಕುದಿಸಿ ಇಳಿಸಿ. ಎರಡು ಚಮಚ ತುಪ್ಪ ಬಾಣಲೆಗೆ ಹಾಕಿ, ಬಿಸಿ ಮಾಡಿ ಗೋಡಂಬಿ ಹುರಿದು ತೆಗೆದಿಡಿ.
ಅದೇ ಬಾಣಲೆಗೆ ಉಳಿದ ತುಪ್ಪ ಹಾಕಿ, ಸಾಸಿವೆ, ಜೀರಿಗೆ ಇಂಗು, ಕರಿಬೇವು , ಉದ್ದಿನ ಬೇಳೆ ಹಾಕಿ ಹುರಿಯಿರಿ. ಕತ್ತರಿಸಿದ ಹಸಿ ಶುಂಟಿ, ಹಸಿ ಮೆಣಸಿನ ಕಾಯಿ ಮತ್ತು ಟೊಮೆಟೊ ಹಾಕಿ ಚೆನ್ನಾಗಿ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು, ಒಣ ಕಾರದ ಪುಡಿ ಹಾಕಿ ಎರಡು ಲೋಟ ನೀರು ಸೇರಿಸಿ ಚೆನ್ನಾಗಿ ಕುದಿಸಿರಿ. ಅರಿಶಿಣ ಪುಡಿ ಸ್ವಲ್ಪ ಹಾಕಿ, ಒಂದು ಕುದಿ ಕುದಿಸಿ ನಂತರ ಕುದಿಸಿಟ್ಟ ಅನ್ನ ಬೇಳೆ ಹಾಕಿ ಇನ್ನೊಮ್ಮೆ ಕುದಿಸಿ ಇಳಿಸಿ. ಬೇಕು ಅನ್ನಿಸಿದಲ್ಲಿ ಸ್ವಲ್ಪ ನೀರು ಹಾಕಿಕೊಳ್ಳಿ. ಹುರಿದ ಗೋಡಂಬಿ ಹಾಕಿ ಕಲಸಿಟ್ಟುಕೊಳ್ಳಿರಿ. ತುಪ್ಪ ಬೇಕಾದರೆ ಸೇರಿಸಬಹುದು. ಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಉದುರಿಸಿ. ಈಗ ಟೊಮೇಟೊ ಬೇಳೆ ಬಾತ್ ಸವಿಯಲು ಸಿದ್ದ .
ಇತ್ತೀಚಿನ ಅನಿಸಿಕೆಗಳು