ಪಾಲಕ್ ಸೊಪ್ಪಿನ ವಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಪಾಲಕ್ ಸೊಪ್ಪು – 1/2 ಬಟ್ಟಲು
ಕೊತ್ತಂಬರಿ ಸೊಪ್ಪು – 1/2 ಬಟ್ಟಲು
ಪುದೀನಾ – 1/4 ಬಟ್ಟಲು
ಹಸಿ ಶುಂಟಿ – 1/4 ಇಂಚು
ಜೀರಿಗೆ – 1/2 ಚಮಚ
ಚಕ್ಕೆ – 1/4 ಇಂಚು
ಹಸಿ ಮೆಣಸಿನ ಕಾಯಿ – 3
ಬೆಳ್ಳುಳ್ಳಿ ಎಸಳು – 6
ಅಜೀವಾಯಿನ್ ಅತವಾ ಓಂ ಕಾಳು – 1/4 ಚಮಚ
ಗೋಡಂಬಿ – 1/4 ಬಟ್ಟಲು
ಕಡಲೇ ಹಿಟ್ಟು – 1 ಬಟ್ಟಲು
ಗೋದಿ ಸಣ್ಣ ರವೆ – 1 ಬಟ್ಟಲು
ಅಡುಗೆ ಸೋಡಾ – 1/4 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ

ಮಾಡುವ ಬಗೆ

ಎಲ್ಲ ಸೊಪ್ಪು ತೊಳೆದು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಪುದೀನಾ,ಕೊತ್ತಂಬರಿ ಸೊಪ್ಪು, ಪಾಲಕ್ ಮತ್ತು ಹಸಿ ಮೆಣಸಿನ ಕಾಯಿ, ಹಸಿ ಶುಂಟಿ, ಜೀರಿಗೆ, ಬಿಡಿಸಿದ ಬೆಳ್ಳುಳ್ಳಿ ಎಸಳು, ಓಂ ಕಾಳು, ಗೋಡಂಬಿ, ಚಕ್ಕೆ ಉಪ್ಪು ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ. ಇದೇ ನೀರು ಬಿಡುತ್ತದೆ. ನೀರು ಹಾಕದೇ ಇದಕ್ಕೆ ಕಡಲೇ ಹಿಟ್ಟು, ಸಣ್ಣ ರವೆ ಸೇರಿಸಿ. ಸ್ವಲ್ಪ ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಈಗ ಪಾಲಕ್ ಸೊಪ್ಪಿನ ವಡೆ ಸವಿಯಲು ಸಿದ್ದ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications