ಅಕ್ಕಿ-ಹೆಸರು ಬೇಳೆ ಪಾಯಸ

– ಸವಿತಾ.

ಬೇಕಾಗುವ ಸಾಮಾನುಗಳು

ಅಕ್ಕಿ – 1/2 ಲೋಟ
ಹೆಸರು ಬೇಳೆ – 1/2 ಲೋಟ
ಹಸಿ ಕೊಬ್ಬರಿ ತುರಿ – 1/2 ಲೋಟ
ಏಲಕ್ಕಿ – 2
ಬೆಲ್ಲ ಅತವಾ ಸಕ್ಕರೆ – 1.5 ಲೋಟ
ಕೇಸರಿ ದಳ – 5-6 ಎಳೆ
ತುಪ್ಪ – 2 ಚಮಚ
ಗೋಡಂಬಿ – ಸ್ವಲ್ಪ
ಒಣ ದ್ರಾಕ್ಶಿ – ಸ್ವಲ್ಪ

ಮಾಡುವ ಬಗೆ

ಅಕ್ಕಿ ಮತ್ತು ಹೆಸರು ಬೇಳೆ ತೊಳೆದು ಕುಕ್ಕರ್ ನಲ್ಲಿ ಮೂರು ಕೂಗು ಕುದಿಸಿ ಇಳಿಸಿ. ಕೊಬ್ಬರಿ ತುರಿಗೆ ನೀರು ಸೇರಿಸಿ ನುಣ್ಣಗೆ ರುಬ್ಬಿ ತೆಗೆಯಿರಿ. ತೆಂಗಿನ ಹಾಲು ಕುದಿಯಲು ಇಟ್ಟು ಕುದಿಸಿದ ಅಕ್ಕಿ, ಹೆಸರು ಬೇಳೆ ಸೇರಿಸಿ ಮತ್ತೆ ಕುದಿಸಿರಿ. ಒಂದೂವರೆ ಲೋಟ ಬೆಲ್ಲ ಅತವಾ ಸಕ್ಕರೆ ಹಾಕಿ ಕಲಸಿ. ಎಲ್ಲ ಹೊಂದಿಕೊಂಡು ಸ್ವಲ್ಪ ಗಟ್ಟಿಯಾದರೆ ಒಲೆ ಆರಿಸಿ, ಕೇಸರಿ ದಳ ಸೇರಿಸಿ.

ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಗೋಡಂಬಿ, ಒಣ ದ್ರಾಕ್ಶಿ ಹುರಿದು ತೆಗೆದು ಕುದಿಯುವ ಪಾಯಸಕ್ಕೆ ಹಾಕಿರಿ. ಏಲಕ್ಕಿ ಪುಡಿ ಮಾಡಿ ಸೇರಿಸಿ, ಒಂದು ಕುದಿ ಕುದಿಸಿ ಇಳಿಸಿ .

ಈಗ ಅಕ್ಕಿ ಹೆಸರು ಬೇಳೆ ಪಾಯಸ ಸವಿಯಲು ಸಿದ್ದ. ತುಪ್ಪ ಹಾಕಿಕೊಂಡು ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: