ಕವಿತೆ: ಅನುಕೂಲ – ಅನಾನುಕೂಲ
– ಸವಿತಾ.
ಅಪ್ಪನ ಒರಟು ಮಾತು
ಬದುಕುವ ರೀತಿ ಕಲಿಸಿತ್ತು
ಅವ್ವನ ಪ್ರೀತಿ ಮಾತು
ಸಂಬಂದದ ಅರಿವು ತಿಳಿಸಿತ್ತು
ಗುರು ಹಿರಿಯರು ತೋರಿಸಿದ
ಮಾರ‍್ಗ ಬದುಕಿಗೆ ದಾರಿಯಾಯಿತು
ಅಹಂ ಮಾತ್ರ ತಿಳಿಯದೇ ಬಂತು
ವಿನೀತನಾಗಿರುವುದು ಮರೆತುಹೋಗಿತ್ತು
ಬರಬರುತ್ತಾ ಮನುಶ್ಯ ತನ್ನ ತಾನು ಕಳಕೊಂಡಂಗಿತ್ತು
ಏನು ಕಾರಣ ಅಂತ ಹಲುಬಿದರೂ
ಉತ್ತರ ಸಿಗದಂಗಾಯಿತು
ಮನೆ ಜಾಗ ಬದಲಾಗಿತ್ತು
ಅನುಕೂಲ ಹೆಚ್ಚಾಗಿತ್ತು
ನನ್ನವರು ತನ್ನವರು ಇಲ್ಲದೇ ಜೀವ
ಯಾಕೋ ವಿಲಿವಿಲಿ ಒದ್ದಾಡುತ್ತಿತ್ತು
ಪ್ರೀತಿಗಾಗಿ ಹುಡುಕಾಟ ನಡೆಸಿತ್ತು
(ಚಿತ್ರ ಸೆಲೆ: blog.helpingadvisors.com)
ಚಿಕ್ಕದಾಗಿ ಚೊಕ್ಕವಾಗಿ ಬಹಳ ಅರ್ಥಪೂರ್ಣವಾಗಿ ಹೇಳಿದ್ದೀರಿ