ಕವಿತೆ: ಜಯ ವೀರಾಂಜನೇಯ
– ಸವಿತಾ.
ರಾಮನಿದ್ದೆಡೆ ಹನುಮ
ಹನುಮನಿದ್ದೆಡೆ ರಾಮ
ರಾಮನೇ ಹನುಮನ ಪ್ರಾಣ
ರಾಮನ ಬಕ್ತ ಹನುಮಂತ
ಬಕ್ತಿಯಲಿ ನಿಶ್ಟಾವಂತ
ಶಕ್ತಿಯಲಿ ಬಲವಂತ
ಸಾಗರವನೇ ಜಿಗಿದವ
ಸೀತೆಯನು ಕಂಡ
ಚೂಡಾಮಣಿಯನು ತಂದ
ರಾಮದೂತನೆಂದೇ ಪ್ರಕ್ಯಾತ
ಲಂಕೆಗೆ ಬೆಂಕಿ ಇಟ್ಟ
ರಾವಣಸೇನೆಯ ಸದೆ ಬಡಿದ
ವಾನರ ವೀರ, ಶಿವನವತಾರ
ವಿಜಯಿ, ಪವನ ಪುತ್ರ
ಸಂಜೀವಿನಿ ಪರ‍್ವತ ಹೊತ್ತು ತಂದವ
ಕಾಲನೇಮಿ ಅಸುರನ ಕೊಂದ
ಜಯ ಜಯ ವೀರ ಆಂಜನೇಯ
ನಂಬಿದವರ ರಕ್ಶಕ
(ಚಿತ್ರ ಸೆಲೆ: creazilla.com)
ಇತ್ತೀಚಿನ ಅನಿಸಿಕೆಗಳು