ಮಾವಿನಕಾಯಿ ತಂಬುಳಿ

– ಸವಿತಾ.

ಬೇಕಾಗುವ ಸಾಮಾನುಗಳು

ಮೊಸರು – 2 ಲೋಟ
ನೀರು – 1 ಲೋಟ
ಮಾವಿನಕಾಯಿ – 1/2 ಹೊಳು
ಹಸಿ ಕೊಬ್ಬರಿತುರಿ – 1/2 ಲೋಟ
ಕೊತ್ತಂಬರಿ ಸೊಪ್ಪು – 1/4 ಲೋಟ
ಪುದೀನಾ – 1/4 ಲೋಟ
ಹಸಿಮೆಣಸಿನಕಾಯಿ – 2
ಕರಿ ಮೆಣಸಿನ ಕಾಳು – 4
ಲವಂಗ – 2
ದಾಲ್ಚಿನ್ನಿ ( ಚಕ್ಕೆ) – 1/4 ಇಂಚು
ಜೀರಿಗೆ – 1/4 ಚಮಚ
ಎಣ್ಣೆ – 1 ಚಮಚ
ಸಾಸಿವೆ – 1/2 ಚಮಚ
ಜೀರಿಗೆ – 1/2 ಚಮಚ
ಇಂಗು – 1/4 ಚಮಚ
ಕರಿಬೇವು – 10 ಎಲೆ
ಬೆಲ್ಲ – 1 ಚಮಚ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮಾವಿನಕಾಯಿ, ಕೊಬ್ಬರಿಯನ್ನ ತುರಿದುಕೊಂಡು, ಹಸಿಮೆಣಸಿನಕಾಯಿ, ಕರಿ ಮೆಣಸಿನಕಾಳು, ಲವಂಗ, ಚಕ್ಕೆ, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಉಪ್ಪು ಸೇರಿಸಿ ನುಣ್ಣಗೆ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ.

ಮೊಸರಿಗೆ ನೀರು ಸೇರಿಸಿ ಮಜ್ಜಿಗೆ ಮಾಡಿ ರುಬ್ಬಿದ ಮಿಶ್ರಣ ಸೇರಿಸಿ, ಬೆಲ್ಲ ಹಾಕಿ ಇಟ್ಟು ಕೊಳ್ಳಿ. ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿ ಒಲೆ ಆರಿಸಿ. ಒಗ್ಗರಣೆಯನ್ನು ಮಜ್ಜಿಗೆ ಮಿಶ್ರಣಕ್ಕೆ ಸೇರಿಸಿ ಕೈಯಾಡಿಸಿ. ಈಗ ಮಾವಿನ ಕಾಯಿ ತಂಬುಳಿ ತಯಾರಾಯಿತು. ಅನ್ನದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: