ಮಣಿ ಪಾಯಸ

– ಕಲ್ಪನಾ ಹೆಗಡೆ.

ಬೇಕಾಗುವ ಸಾಮಾನುಗಳು:

  • 2 ಕಪ್ ಅಕ್ಕಿ ಹಿಟ್ಟು
  • 1 ಕಪ್ ಸಕ್ಕರೆ ಅತವಾ ಬೆಲ್ಲಾ
  • ಅರ‍್ದ ಹೋಳು ಕಾಯಿತುರಿ
  • 2 ಏಲಕ್ಕಿ
  • ಚಿಟಿಕೆ ಉಪ್ಪು

ಮಾಡುವ ಬಗೆ:

ಮೊದಲು ಒಂದು ಬಾಣಲೆಯಲ್ಲಿ 5 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಆಮೇಲೆ ಅಕ್ಕಿ ಹಿಟ್ಟನ್ನು ಬಿಸಿನೀರಿನಲ್ಲಿ ಹಾಕಿ, ಸ್ವಲ್ಪ ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಗಟ್ಟಿಯಾಗಿ ಕಲಸಿಕೊಳ್ಳಬೇಕು. ಆನಂತರದಲ್ಲಿ ಕಾದ ಬಿಸಿ ನೀರಿಗೆ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಜಾಲಿ ಸೌಟಿನಲ್ಲಿ ಕೈಯಿಂದ ಹರಡಿ ಪ್ರೆಸ್ ಮಾಡಬೇಕು. ಆಗ ಹಿಟ್ಟು ಮಣಿ ಆಕಾರದಲ್ಲಿ ನೀರಿನಲ್ಲಿ ಬಿದ್ದು ಚೆನ್ನಾಗಿ ಬೆಂದ ನಂತರ ಅದಕ್ಕೆ ಸಕ್ಕರೆ ಅತವಾ ಬೆಲ್ಲವನ್ನು ಹಾಕಿಕೊಳ್ಳಬೇಕು. ಆಮೇಲೆ ಕಾಯಿತುರಿ, ಏಲಕ್ಕಿ, ಮಿಕ್ಸಿಯಲ್ಲಿ ರುಬ್ಬಿದ ಕಲಕವನ್ನು ಹಾಗೂ ಚಿಟಿಕೆ ಉಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತಯಾರಾದ ಮಣಿ ಪಾಯಸವನ್ನು ಕಪ್ ಗೆ ಹಾಕಿ ಅದಕ್ಕೆ ಸ್ವಲ್ಪ ತುಪ್ಪವನ್ನು ಹಾಕಿ ಸವಿಯಲು ನೀಡಿ. ಈ ಪಾಯಸ ತಿನ್ನೋದಕ್ಕೆ ತುಂಬಾನೆ ಚೆನ್ನಾಗಿರತ್ತೆ .(ಒಂದೊಮ್ಮೆ ಕಾಯಿ ತಿನ್ನದೇ ಇದ್ದವರು ಹಾಲನ್ನು ಕೂಡಾ ಹಾಕಿ ಕೊಳ್ಳಬಹುದು).

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: