ಮಿನಿಹನಿಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಸಾಲ ***

ಶುರುವಾಯ್ತು ಮಳೆ
ಆಪರ್ ಗಳ ಸುರಿಮಳೆ
ಮತದಾರನ ತಲೆಗೆ
ಸಾಲದ ಮೊಳೆ

*** ಅಬಿವ್ರುದ್ದಿ ***

ಅಬಿವ್ರುದ್ದಿಯ ಅರ‍್ತ
ಬದಲಾಗಿದೆ
ಯಾರ ಅಬಿವ್ರುದ್ದಿ
ಎಂದು ಕೇಳಬೇಕಿದೆ

*** ಉಚಿತ ***

ನಿಮಗೆ
ಎಲ್ಲವೂ ಉಚಿತ
ನಮಗೇ ಓಟು ಹಾಕಿದರೆ
ನಿಮ್ಮದು ನಿಮಗೆ ಕೊಡಲು
ನಮಗೇನು ತೊಂದರೆ…?

*** ಮತದಾರ ***

ಯಾರಿಗೂ ಸಿಗುತಿಲ್ಲ
ಗಟ್ಟಿಯಾದ ಮತದಾರ
ಅವರೂ ಇವರೂ
ಜಗ್ಗಿದ ಹಾಗೆ
ಹರಿದಂತೆ ದಾರ

*** ತಪ್ಪು ***

ನಮ್ಮದೇನೂ ತಪ್ಪಿಲ್ಲ
ಎಂದರು
ಅವರೂ ಇವರೂ
ತಪ್ಪೆಲ್ಲಾ ಅವರದೇ
ಎಂದರು
ಇವರೂ ಅವರೂ

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks