ಕವಿತೆ: ಬನ್ನಿ ದುಂಬಿಗಳೇ

ಮಲ್ಲೇಶ್. ಎಸ್.

ಜೇನು, ಹೂವು, flower, bee, bees

ಬನ್ನಿ ಬನ್ನಿ ದುಂಬಿಗಳೇ
ಜೇಂಕಾರವ ಹಾಡಿರಿ
ನನ್ನೆದೆಯ ಬಾಂದಳದಿ
ಹೊಸ ರಾಗವ ತನ್ನಿರಿ

ಹೊಸಬಾಳಿನ ರುತುವಿಗೆ
ಚಿಗುರೆಲೆಯ ತೋರಣ
ನವಚೈತ್ರದ ಕೊರಳಿಗೆ
ಚಂದ್ರಮನ ಆಹ್ವಾನ

ಬನ್ನಿ ಇಲ್ಲಿಯೇ ನೆಲಸಿಹುದು
ಹೊಸ ಕಾಮನೆ ಒಲವು
ಬನ್ನಿ ಇಲ್ಲಿಯೇ ಅಡಗಿಹುದು
ಸ್ರುಶ್ಟಿಯ ಹೊಸ ನಿಲುವು

ಅತ್ತು ಬಳಲಿದ ಬಾಳಿಗೆ
ಪ್ರೀತಿಯ ಮಳೆ ಸುರಿಸಿರಿ
ಬತ್ತಿ ಹೋಗಿಹ ನಮ್ಮೆದೆಗೆ
ಹಾಲಿನ ಹೊಳೆ ಹರಿಸಿರಿ

ಬನ್ನಿ ಬನ್ನಿ ದುಂಬಿಗಳೇ
ಜೇಂಕಾರವ ಹಾಡಿರಿ
ನನ್ನೆದೆಯ ಬಾಂದಳದಿ
ಹೊಸ ರಾಗವ ತನ್ನಿರಿ

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: