ಕವಿತೆ: ಗೆಳೆತನವ ಸಂಬ್ರಮಿಸೋಣ
ಅದಾವ ಬಂದವೋ
ಅರಿಯದೇ ಬೆಸೆವುದು
ಪ್ರೀತಿ ಸಲುಗೆಯಿಂದ
ನಿರ‍್ಮಲ ಬಾವದಿಂದ
ಮನವ ಕೂಗಿ ಕರೆವುದು
ಮೊದಲಿಲ್ಲ ಕೊನೆಯಿಲ್ಲ
ಸಿರಿತನದ ಅಮಲಿಲ್ಲ
ಬಡತನದ ಸುಳಿವಿಲ್ಲ
ಬೇದ ಬಾವಗಳ ಹಂಗಿಲ್ಲ
ಈ ಸ್ನೇಹ ಬೆಸುಗೆಗೆ
ಮಾತಿನೋಕುಳಿಯ ಚೆಲ್ಲಿ
ತಿಳಿಹಾಸ್ಯದ ಹೊನಲಿನಲ್ಲಿ
ಜಂಜಾಟಗಳ ಮರೆಯಲ್ಲಿ
ಮನವ ಹಗುರಾಗಿಸುವುದು
ಈ ಮದುರ ಮೈತ್ರಿ
ಸಜ್ಜನರೊಡನೆ ಬೆರೆತು
ದುರುಳತೆಯ ದೂರವಿತ್ತು
ಸುವಿಚಾರದ ಸವಿಯಲ್ಲಿ
ಗೆಳೆತನವ ಸಂಬ್ರಮಿಸೋಣ
ಬದುಕ ಸಾರ‍್ತಕವಾಗಿಸೋಣ
(ಚಿತ್ರ ಸೆಲೆ: maxpixel.net)
ಇತ್ತೀಚಿನ ಅನಿಸಿಕೆಗಳು